ಬೆಂಗಳೂರು : ಆಸ್ಪತ್ರೆಗಳಿಗೂ ಹುಸಿಬಾಂಬ್‌ ಬೆದರಿಕೆ ಸಂದೇಶ: ಕೆಲ ಕಾಲ ಆತಂಕ

| Published : May 13 2024, 01:01 AM IST / Updated: May 13 2024, 06:58 AM IST

ಬೆಂಗಳೂರು : ಆಸ್ಪತ್ರೆಗಳಿಗೂ ಹುಸಿಬಾಂಬ್‌ ಬೆದರಿಕೆ ಸಂದೇಶ: ಕೆಲ ಕಾಲ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್‌ ಇ-ಮೇಲ್‌ ಬಂದ ಬೆನ್ನಲ್ಲೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹುಸಿ ಬಾಂಬ್‌ ಮೇಲ್‌ ಬಂದಿದೆ.

 ಬೆಂಗಳೂರು "  ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್‌ ಇ-ಮೇಲ್‌ ಬಂದ ಬೆನ್ನಲ್ಲೇ ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹುಸಿ ಬಾಂಬ್‌ ಮೇಲ್‌ ಬಂದಿದೆ. ಬಾಂಬ್‌ ಇರಿಸಿರುವುದಾಗಿ ದುಷ್ಕರ್ಮಿಗಳು ಭಾನುವಾರ ಬೆದರಿಕೆ ಇ-ಮೇಲ್‌ ಸಂದೇಶ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.ಪರಿಶೀಲನೆ ಬಳಿಕ ಇದೊಂದು ಹುಸಿಬಾಂಬ್‌ ಬೆದರಿಕೆ ಸಂದೇಶ ಎಂಬುದು ಖಚಿತವಾಗಿದೆ. ನಗರ ಪೊಲೀಸ್ ಇಲಾಖೆಯ ವಿಶೇಷ ಘಟಕದ (ಸ್ಪೆಷಲ್ ಬ್ರ್ಯಾಚ್) ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿದೆ. ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ವಿಶೇಷ ಘಟಕದ ಇ-ಮೇಲ್‌ ಪರಿಶೀಲನೆ ವೇಳೆ ನಗರದ ಸೇಂಟ್ ಫಿಲೋಮಿನಾ, ಸೇಂಟ್ ಮಾರ್ಥಸ್, ಜೆಎಂಜೆ ಸೇರಿ ನಗರದ ಆರೇಳು ಆಸ್ಪತ್ರೆಗಳ ಹೆಸರಳನ್ನು ಉಲ್ಲೇಖಿಸಿ, ಇನ್ನು ಕೆಲವೇ ಕ್ಷಣಗಳಲ್ಲಿ ಈ ಆಸ್ಪತ್ರೆಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಸಂದೇಶ ಬಂದಿರುವುದು ಗೊತ್ತಾಗಿದೆ.

ತಕ್ಷಣ ಪೊಲೀಸರು, ಬಾಂಬ್‌ ನಿಷ್ಕ್ರಿಯದಳ, ಶ್ವಾನದಳದೊಂದಿಗೆ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಯಾವುದೇ ಬಾಂಬ್‌, ಸ್ಫೋಟಕವಸ್ತುಗಳು, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್‌ ಬೆದರಿಕೆ ಸಂದೇಶ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಹುಸಿ ಬಾಂಬ್‌ ಬೆದರಿಕೆ ಸಂದೇಶದ ಹಿಂದಿನ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.