ಚಳ್ಳಕೆರೆ: ಅಪ್ರಾಪ್ತೆಯೊಂದಿಗೆ ವಿವಾಹ ಬೇಡ ಎಂದು ತಾಯಿ ಹೇಳಿದ್ದಕ್ಕೆ ಮನನೊಂದ ಯುವಕ ನೇಣಿಗೆ

| Published : Aug 25 2024, 07:53 AM IST

suicide

ಸಾರಾಂಶ

ಅಪ್ರಾಪ್ತೆಯೊಂದಿಗೆ ವಿವಾಹ ಬೇಡ ಎಂದು ತಾಯಿ ಹೇಳಿದ್ದಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ.

ಚಳ್ಳಕೆರೆ: ಅಪ್ರಾಪ್ತೆಯೊಂದಿಗೆ ವಿವಾಹ ಬೇಡ ಎಂದು ತಾಯಿ ಹೇಳಿದ್ದಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ. 

ಪಂಚರ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅಬ್ದುಲ್‌ ರೆಹಮಾನ್ (22) ಮೃತ ಯುವಕ. ಅಬ್ದುಲ್ ತುಮಕೂರು ಮೂಲದ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಮದುವೆ ಮಾಡಿಸುವಂತೆ ತನ್ನ ತಾಯಿಯನ್ನು ಕೇಳಿದ್ದ. 

ಬಾಲಕಿ ಅಪ್ರಾಪ್ತೆಯಾಗಿದ್ದು ಸದ್ಯಕ್ಕೆ ಬೇಡ ಎಂದು ತಾಯಿ ಬುದ್ಧಿಮಾತು ಹೇಳಿದ್ದರು. ಇದರಿಂದ ಮನನೊಂದ ಅಬ್ದುಲ್‌, ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆ.