ಹಳೆ ವೈಷಮ್ಯ: ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ

| Published : Aug 07 2025, 12:45 AM IST

ಸಾರಾಂಶ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮೂವರ ಗುಂಪು ಯುವಕನಿಗೆ ಬಾಟಲ್ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ಬಾರ್‌ನಲ್ಲಿ ಬುಧವಾರ ಜರುಗಿದೆ. ಪಟ್ಟಣದ ಎನ್ಇಎಸ್ ಬಡಾವಣೆಯ ಮಧು ಅವರ ಪುತ್ರ ಯೋಗೇಶ ಕೊಲೆಯಾದ ಯುವಕ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮೂವರ ಗುಂಪು ಯುವಕನಿಗೆ ಬಾಟಲ್ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಾಲೂಕಿನ ಮಾಗನೂರು ಗ್ರಾಮದ ಬಾರ್‌ನಲ್ಲಿ ಬುಧವಾರ ಜರುಗಿದೆ.

ಪಟ್ಟಣದ ಎನ್ಇಎಸ್ ಬಡಾವಣೆಯ ಮಧು ಅವರ ಪುತ್ರ ಯೋಗೇಶ (26) ಕೊಲೆಯಾದ ಯುವಕ. ಮಾಗನೂರು ಬಳಿಯ ಸಿದ್ದೇಶ್ವರ ಬಾರ್ ಅಂಡ್ ರೆಸ್ಟೋಂಟರ್‌ನಲ್ಲಿ ಬೆಳಗ್ಗೆ ಮದ್ಯಪಾನ ಮಾಡುತ್ತಿದ್ದಾಗ ಯೋಗೇಶ ಮೇಲೆ ಮೂವರು ಯುವಕರ ಗುಂಪು ಬಾಟಲ್ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ಸಿಬ್ಬಂದಿಯೊಂದಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಬಾರ್‌ನ ಸಿಸಿ ಟಿವಿಯಲ್ಲಿ ಕೊಲೆಯಾದ ದೃಶ್ಯ ಸೆರೆಯಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐ ಬಿ.ಜಿ.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೂವಿನ ತೋಟಕ್ಕೆ ವಿಷ ಸಿಂಪಡಣೆ

ಪಾಂಡವಪುರ:

ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಹೂವಿನ ತೋಟಕ್ಕೆ ವಿಷಪ್ರಾಶನ ಮಾಡಿದ ಪರಿಣಾಮ ಲಕ್ಷಾಂತರ ರು. ಮೌಲ್ಯದ ಗಿಡಗಳಿಗೆ ಹಾನಿಯಾಗಿರುವ ಘಟನೆ ಸುಂಡಳ್ಳಿಯಲ್ಲಿ ನಡೆದಿದೆ. ಗ್ರಾಮದ ರೈತ ಮಧುಗೆ ಸೇರಿದ ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೇವಂತಿ ಹೂವಿನ ತೋಟದಲ್ಲಿ ಹೂ ಕಟಾವಿಗೆ ಬಂದಿತ್ತು. ಕಾಟಾವು ಸಂದರ್ಭದಲ್ಲೆ ವಿಷ ಸಿಂಪಡಣೆ ಮಾಡಿರುವುದರಿಂದ ಲಕ್ಷಾಂತ ರು. ನಷ್ಟ ಉಂಟಾಗಿದೆ. ಇದರಿಂದ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತ ಮಧು ಪರಿಹಾರಕ್ಕಾಗಿ ಮನವಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.