ಸಾರಾಂಶ
ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಯುವಕರ ಗುಂಪು ಅನ್ಯ ಕೋಮಿನ ಯುವಕನ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿರುವ ಘಟನೆ ತಾಲೂಕಿನ ಕೊಪ್ಪ ಗ್ರಾಮ ಸಮೀಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಬಳಿ ಗುರುವಾರ ಸಂಜೆ ಜರುಗಿದೆ.
ಮದ್ದೂರು : ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಯುವಕರ ಗುಂಪು ಅನ್ಯ ಕೋಮಿನ ಯುವಕನ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿರುವ ಘಟನೆ ತಾಲೂಕಿನ ಕೊಪ್ಪ ಗ್ರಾಮ ಸಮೀಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಬಳಿ ಗುರುವಾರ ಸಂಜೆ ಜರುಗಿದೆ.
ಕೊಪ್ಪ ಗ್ರಾಮದ ಅಸ್ಲಾಂ ಪಾಷಾ ಪುತ್ರ ಯಾಸಿಂ ಪಾಷ (24) ಚಾಕು ಇರಿತದಿಂದ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಕರಣ ಸಂಬಂಧ ಹುರುಗಲವಾಡಿ ಗ್ರಾಮದ ವಿಕಾಶ್, ಚೊಟ್ಟನಹಳ್ಳಿಯ ಸಮಿತ್ ಹಾಗೂ ಮಂಡ್ಯ ತಾಲೂಕು ಹುಲಿವಾನ ಗ್ರಾಮದ ಕಾರ್ತಿಕ್ ಸೇರಿದಂತೆ ನಾಲ್ವರು ಯುವಕರ ಗುಂಪು ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಬಳಿ ಶುಕ್ರವಾರ ಸಂಜೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಯುವಕರ ಗುಂಪು ಯಾಸಿಂ ಪಾಷ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕೊಪ್ಪ ಪಿಎಸ್ಐ ಭೀಮಪ್ಪ ಬಾಣಸಿ ಆರೋಪಿಗಳ ವಿರುದ್ಧ ಐಪಿಸಿ 307 ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಂತರ ಮದ್ದೂರು ಜೆಎಂಎಫ್ ಸಿ ನ್ಯಾಯಾಲಯದ ಒಂದನೇ ಅಪರ ಸಿವಿಲ್ ನ್ಯಾಯಾಧೀಶ ರಾಧಾ ಎಸ್.ಸಿ.ನಳಿನ ಅವರ ಮುಂದೆ ಶನಿವಾರ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಮನ್ಮುಲ್ ನಿರ್ದೇಶಕರಿಂದ ಕೊಲೆ ಬೆದರಿಕೆ ಆರೋಪ, ಶಾಸಕ ಎಚ್.ಟಿ.ಮಂಜು ಅವರಿಂದ ಪೊಲೀಸರಿಗೆ ದೂರು
ಮಂಡ್ಯ : ಮನ್ಮುಲ್ ನಿರ್ದೇಶಕ ಚುನಾವಣೆ ವಿಚಾರವಾಗಿ ಹಾಲಿ ನಿರ್ದೇಶಕ ಕೆ.ರವಿ (ಡಾಲು ರವಿ) ಡೇರಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಿದ್ದು, ಕ್ರಮ ಕೈಗೊಳ್ಳುವಂತೆ ಶಾಸಕ ಎಚ್.ಟಿ.ಮಂಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮುಂಬರುವ ಫೆಬ್ರವರಿಯಲ್ಲಿ ನಡೆಯಲಿರುವ ಮನ್ಮುಲ್ ಚುನಾವಣೆ ಸಂಬಂಧವಾಗಿ ತಾಲೂಕಿನಲ್ಲಿ ಸರ್ಕಾರದ, ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಕರಡು ಮತದಾರ ಪಟ್ಟಿಯಲ್ಲಿ ಮತದಾರರ ಹೆಸರನ್ನು ಸೇರುತ್ತಿದ್ದಾರೆ ಎಂದು ದೂರಿದ್ದಾರೆ.
ಅಲ್ಲದೇ, ಚುನಾವಣೆಯಲ್ಲಿ ಪ್ರತಿನಿಧಿ ಆಯ್ಕೆಯಲ್ಲಿ ಹಣದ ಆಸೆ, ಕೊಲೆ ಬೆದರಿಕೆ ಹಾಕಿ ಸಭೆ ನಡೆಯದಿದ್ದರೂ ಸಭೆಗೆ ಮುಂಚಿತವಾಗಿ ಕಾರ್ಯದರ್ಶಿ, ಅಧ್ಯಕ್ಷರು, ಸಂಬಂಧಿಕರನ್ನು ಕೂಡಿ ಹಾಕಿ ತನಗೆ ಬೇಕಾದ ಪ್ರತಿನಿಧಿಯಾಗಿ ನಡಾವಳಿ ಹಾಗೂ ಡೇಲಿಗೇಶನ ನಮೂನೆಗಳಲ್ಲಿ ಬರೆಸುವ ಮೂಲಕ ಚುನಾವಣೆ ಪೂರ್ವ ಅಕ್ರಮ ಮಾಡುತ್ತಿದ್ದಾರೆ. ಬಲವಂತವಾಗಿ ಸದಸ್ಯರ ಮತದಾನ ಹಕ್ಕು ಕಸಿದು ಸಂಘದ ಸದಸ್ಯರ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.