ಸಾರಾಂಶ
ಪಾಂಡವಪುರ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯ್ತಿ ಕಚೇರಿಗೆ ವಿದ್ಯುತ್ ದೀಪ ಅಲಂಕಾರ ಮಾಡುವ ವೇಳೆ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ವಾಟರ್ ಮೆನ್ ಒಬ್ಬ ಸ್ಥಳದಲ್ಲೇ ಸವಿಗಿಡಾಗಿದ್ದರೆ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಳೇಬೀಡು ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಹೊಸಕೋಟೆ ಗ್ರಾಮದ ಪ್ರಕಾಶ್ (45) ಮೃತ ವಾಟರ್ ಮ್ಯಾನ್ ಆಗಿದ್ದಾನೆ. ಮೀನಾಗರ ಗ್ರಾಮದ ಲೋಕೇಶ್ ಮತ್ತು ಹೊಸಕೋಟೆ ಗ್ರಾಮದ ವೆಂಕಟೇಶ್ ಗಾಯಗೊಂಡವರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಂಚಾಯ್ತಿ ಕಚೇರಿಗೆ ವಿದ್ಯುತ್ ದೀಪ ಅಲಂಕಾರ ಮಾಡುವ ವೇಳೆ ಪಕ್ಕದಲ್ಲೇ ವಿದ್ಯುತ್ ಲೈನ್ ಹಾದು ಹೋಗಿದ್ದು, ಅದರಿಂದ ಸಂಪರ್ಕ ಪಡೆಯುವ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟನು ಎನ್ನಲಾಗಿದೆ.
ವಿದ್ಯುತ್ ಅವಘಡದಲ್ಲಿ ಗಾಯಗೊಂಡಿರುವ ಲೋಕೇಶ್ ಮತ್ತು ವೆಂಕಟೇಶ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಯಿ, ಮಗಳು ನಾಪತ್ತೆ
ಹಲಗೂರು:ಮಳವಳ್ಳಿ ತಾಲೂಕು ಡಿ.ಹಲಸಹಳ್ಳಿಯ ಶ್ವೇತಾ (35), ಮಗಳು ಮೊನಿಷಾ (12) ಕಾಣೆಯಾಗಿದ್ದಾರೆ.
ಮಹಿಳೆಯು 5 ಅಡಿ ಎತ್ತರ, ಸಾಧಾರಣ ಶರೀರ, ದುಂಡುಮುಖ, ಎಣ್ಣೆಗೆಂಪು ಮೈ ಬಣ್ಣ ತಲೆಯಲ್ಲಿ ಕಪ್ಪು ಕೂದಲು ಹೊಂದಿದ್ದು, ಕಾಣೆಯಾದ ದಿನ ಕಪ್ಪು ಬಣ್ಣದ ಚೂಡಿದಾರ, ಬಿಳಿ ಬಣ್ಣದ ವೇಎಲು ಧರಿಸಿರುತ್ತಾರೆ. ಮಗಳು 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ ಹೊಂದಿದ್ದು ಕಾಣೆಯಾದ ದಿನ ನೀಲಿ ಬಣ್ಣದ ಲಗ್ಗಿನ್ಸ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ ದೂ-08231-295322/,ಮೊ-9480804866 ಅನ್ನು ಸಂಪರ್ಕಿಸಬಹುದು ಎಂದು ಹಲಗೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.