ಸಾಲಬಾಧೆಗೆ ಊಗಿನಹಳ್ಳಿ ರೈತ ಆತ್ಮಹತ್ಯೆ..!

| Published : Oct 31 2025, 02:00 AM IST

ಸಾರಾಂಶ

ಮನೆಯಲ್ಲಿ ಯಾರು ಇಲ್ಲದಿರುವಾಗ ನಂಜಪ್ಪ ತನ್ನ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥರಾಗಿದ್ದ ಇವರನ್ನುತುರ್ತು ಚಿಕಿತ್ಸೆಗೆ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತರಾದರು.

ಕಿಕ್ಕೇರಿ: ಸಾಲಬಾಧೆಯಿಂದ ರೈತ ಸಾವನ್ನಪ್ಪಿರುವ ಘಟನೆ ಊಗಿನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ರೈತ ನಂಜಪ್ಪ(47). ನಂಜಪ್ಪ ಹಾಗೂ ಇವರ ತಂದೆ ಬೋರೇಗೌಡರ ಹೆಸರಿನಲ್ಲಿ ಜಂಟಿ ಖಾತೆಯಲ್ಲಿ 1.5 ಲಕ್ಷ ರು. ಅನ್ನು ಕಾವೇರಿ ಗ್ರಾಮೀಣ ಬ್ಯಾಂಕ್‌ ಕಿಕ್ಕೇರಿಯಲ್ಲಿ ಕೃಷಿ ಸಾಲ ಮಾಡಿದ್ದರು. ಜೊತೆಗೆ ಸಾಕಷ್ಟು ಖಾಸಗಿಯಾಗಿ ಕೈ ಸಾಲ ಮಾಡಿಕೊಂಡಿದ್ದರು. ತಾಯಿ ಲಕ್ಷ್ಮಮ್ಮ ಹೆಸರಿನಲ್ಲಿ 2 ಲಕ್ಷ ರು., ಕಿಕ್ಕೇರಿ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿಕೃಷಿ ಸಾಲ ಮಾಡಿದ್ದರು. ಹೆಂಡತಿ ಧನಲಕ್ಷ್ಮೀ ಹೆಸರಿನಲ್ಲಿ ಕಿಕ್ಕೇರಿ ಡಿಸಿಸಿ ಬ್ಯಾಂಕ್‌ನಲ್ಲಿ ಒಡವೆ ಸಾಲವಾಗಿ 1.5 ಲಕ್ಷ ರು. ಇತ್ತು ಎಂದು ಹೇಳಲಾಗಿದೆ.

ತಮ್ಮ 2 ಎಕರೆ ಕೃಷಿ ಭೂಮಿಯಲ್ಲಿ ಕಬ್ಬು ಬೆಳೆ ಬೆಳೆದಿದ್ದರು. ಇನ್ನು ಕಟಾವು ಮಾಡಲಾಗಿರಲಿಲ್ಲ. ಸಾಲದ ಹೊರೆ ಜಾಸ್ತಿಯಾಗಿ ಸಾಲ ತೀರಿಸಲು ಸಾಧ್ಯವಾಗದೇ ಯೋಚನೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು.

ಮನೆಯಲ್ಲಿ ಯಾರು ಇಲ್ಲದಿರುವಾಗ ನಂಜಪ್ಪ ತನ್ನ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥರಾಗಿದ್ದ ಇವರನ್ನುತುರ್ತು ಚಿಕಿತ್ಸೆಗೆ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತರಾದರು. ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ನಾಗಮಂಗಲ: ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿ ಬೆಳ್ಳೂರು ಕಡೆ ಹೋಗುವ ಬಸ್ ನಿಲ್ದಾಣದ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಗೆ ಸುಮಾರು 55 ವರ್ಷವಾಗಿದೆ. ಕೋಲು ಮುಖ, ತುಂಬು ತೋಳಿನ ಸಿಮೇಂಟ್ ಬಣ್ಣದ ಶರ್ಟ್, ಕಪ್ಪು ಬಣ್ಣದ ಚಡ್ಡಿ ಹಾಗೂ ಲಾಡಿ ಧರಿಸಿರುತ್ತಾರೆ. ವಾರಸುದಾರರಿದ್ದಲ್ಲಿ ಪೊಲೀಸ್ ಠಾಣೆ ದೂ-08234-287535-/0821-2445168 ಅನ್ನು ಸಂಪರ್ಕಿಸಬಹುದು ಎಂದು ಬೆಳ್ಳೂರು ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ತಿಳಿಸಿದ್ದಾರೆ.