ಲಂಚಬಾಕ ಸಬ್‌ ರಿಜಿಸ್ಟ್ರಾರ್‌ ಟೇಬಲ್‌ ಮೇಲೆ ಕೆಆರ್‌ಎಸ್‌ ಪಕ್ಷದ ನೇತೃತ್ವದಲ್ಲಿ ಚಿಲ್ಲರೆ ಸುರಿದು ಜನರ ಆಕ್ರೋಶ!

| N/A | Published : Mar 06 2025, 12:32 AM IST / Updated: Mar 06 2025, 04:48 AM IST

ಲಂಚಬಾಕ ಸಬ್‌ ರಿಜಿಸ್ಟ್ರಾರ್‌ ಟೇಬಲ್‌ ಮೇಲೆ ಕೆಆರ್‌ಎಸ್‌ ಪಕ್ಷದ ನೇತೃತ್ವದಲ್ಲಿ ಚಿಲ್ಲರೆ ಸುರಿದು ಜನರ ಆಕ್ರೋಶ!
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಯ ಹಣದ ದಾಹಕ್ಕೆ ಬೇಸತ್ತ ಜನ ಕೆಆರ್‌ಎಸ್‌ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಚಿಲ್ಲರೆ ಹಣ ಅವರ ಟೇಬಲ್‌ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದಿದೆ.

 ಚಿಕ್ಕನಾಯಕನಹಳ್ಳಿ : ಅಧಿಕಾರಿಯ ಹಣದ ದಾಹಕ್ಕೆ ಬೇಸತ್ತ ಜನ ಕೆಆರ್‌ಎಸ್‌ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಚಿಲ್ಲರೆ ಹಣ ಅವರ ಟೇಬಲ್‌ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದಿದೆ.

 ಉಪನೋಂದಣಾಧಿಕಾರಿ ರಾಘವೇಂದ್ರ ಒಡೆಯರ್‌ ಕಚೇರಿಗೆ ನುಗ್ಗಿದ ರೈತರು ಹಾಗೂ ಕೆಆರ್‌ಎಸ್‌ ಕಾರ್ಯಕರ್ತರು ಅವರ ವಿರುದ್ಧ ಘೋಷಣೆ ಕೂಗಿದರು. ಅನಂತರ ಮೈಸೂರು ಪೇಟ ತೊಡಿಸಲು ಮುಂದಾಗುತ್ತಿದ್ದಂತೆ ಹೊರಹೋಗಲು ಯತ್ನಿಸಿದ ಅಧಿಕಾರಿಯನ್ನು ತಡೆಹಿಡಿದರು.

ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ನೀವೇ ಕಾರಣ. ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದು ತೆಗೆದುಕೊಳ್ಳಿ ಎಂದು ಚಿಲ್ಲರೆ ಹಣ ಅವರ ಟೇಬಲ್‌ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಘವೇಂದ್ರ ಅವರು ಮುಜುಗರಕ್ಕೆ ಒಳಗಾಗಿದ್ದು ಕಂಡು ಬಂತು.