ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಸಾವು: ಕೊಲೆ ಶಂಕೆ
KannadaprabhaNewsNetwork | Published : Oct 20 2023, 01:00 AM IST
ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಸಾವು: ಕೊಲೆ ಶಂಕೆ
ಸಾರಾಂಶ
ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜ್ಜನಡು ಹಾಗೂ ಚಿನ್ನಮ್ಮನಹಳ್ಳಿಯ ರಸ್ತೆ ಬಳಿ ಕಂಡು ಬಂದಿದೆ. ನೇಣಿಗೆ ಶರಣಾದ ವ್ಯಕ್ತಿ ಈರಣ್ಣ (45) ಎಂದು ಗುರುತಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪಾವಗಡ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜ್ಜನಡು ಹಾಗೂ ಚಿನ್ನಮ್ಮನಹಳ್ಳಿಯ ರಸ್ತೆ ಬಳಿ ಕಂಡು ಬಂದಿದೆ. ನೇಣಿಗೆ ಶರಣಾದ ವ್ಯಕ್ತಿ ಈರಣ್ಣ (45) ಎಂದು ಗುರುತಿಸಲಾಗಿದೆ. ಹರಿಹರಪುರದ ನಿವಾಸಿ ಈರಣ್ಣ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು ಕಂಡು ಬಂದಿದೆ. ಇದು ಅನುಮಾನಸ್ಪಾದಕ್ಕೆ ಎಡೆಮಾಡಿದ್ದು, ಸಾರ್ವಜನಿಕರು ಮೃತರ ಪತ್ನಿ ಕರಿಯಮ್ಮಗೆ ವಿಷಯ ತಿಳಿಸಿದ್ದಾರೆ. ಮೃತರಿಗೆ ಮೂವರು ಹೆಣ್ಣು ಮಕ್ಕಳು , ಓರ್ವ ಮಗ ಇದ್ದಾನೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್ ಹಾಗೂ ಅರಸೀಕೆರೆ ಠಾಣೆಯ ಪಿಎಸ್ಐ ತಾರಸಿಂಗ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ಪತ್ನಿ ಕರಿಯಮ್ಮ ಹಾಗೂ ವಾರಸುದಾರರಿಗೆ ಶವ ಹಸ್ತಾಂತರಿಸಿದ್ದು, ಸ್ಥಳಕ್ಕೆ ದಲಿತ ಪರ ಸಂಘಟನೆ ಮುಖಂಡರು ಭೇಟಿ ನೀಡಿ ಘಟನೆ ಸಂಬಂಧ ಮಾಹಿತಿ ಪಡೆದರು. ಫೋಟೋ 19ಪಿವಿಡಿ1 ಪಾವಗಡ ನೇಣು ಬಿಗಿದ ಸ್ಥಿತಿಯಲ್ಲಿ ಹರಿಹರಪುರದ ಈರಣ್ಣ ಸಾವು