ಬೆಂಗಳೂರು: ಉತ್ತರ ವಿಭಾಗದ 290 ರೌಡಿ ಮನೆಗಳಿಗೆ ಪೊಲೀಸ್‌ ದಾಳಿ

| Published : Mar 28 2024, 12:53 AM IST / Updated: Mar 28 2024, 01:26 PM IST

ಬೆಂಗಳೂರು: ಉತ್ತರ ವಿಭಾಗದ 290 ರೌಡಿ ಮನೆಗಳಿಗೆ ಪೊಲೀಸ್‌ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದ್ದು, ಉತ್ತರ ವಿಭಾಗದ 290ಕ್ಕೂ ಹೆಚ್ಚಿನ ರೌಡಿಗಳ ಮನೆಗೆ ಮಂಗಳವಾರ ತಡ ರಾತ್ರಿ ಪೊಲೀಸರು ಹಠಾತ್‌ ತೆರಳಿ ತಪಾಸಣೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದ್ದು, ಉತ್ತರ ವಿಭಾಗದ 290ಕ್ಕೂ ಹೆಚ್ಚಿನ ರೌಡಿಗಳ ಮನೆಗೆ ಮಂಗಳವಾರ ತಡ ರಾತ್ರಿ ಪೊಲೀಸರು ಹಠಾತ್‌ ತೆರಳಿ ತಪಾಸಣೆ ನಡೆಸಿದ್ದಾರೆ.

ಉತ್ತರ ವಿಭಾಗ ವ್ಯಾಪ್ತಿಯ 290 ರೌಡಿಗಳ ಮನೆಗಳಿಗೆ ರಾತ್ರಿ 1ಕ್ಕೆ ಹಠಾತ್ ತೆರಳಿ ತಪಾಸಣೆ ನಡೆಸಲಾಗಿದೆ. ಈ ಕಾರ್ಯಚಾರಣೆಗೆ ಎಲ್ಲ ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ 50 ತಂಡ ರಚಿಸಲಾಗಿತ್ತು. 

ಅಕ್ರಮ ಚಟುವಟಿಕೆಯಲ್ಲಿ ತೊಡಗಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಧಕ್ಕೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿರುವ ಪೊಲೀಸರು, ಚುನಾವಣಾ ಅಕ್ರಮಗಳಲ್ಲಿ ತೊಡಗದಂತೆ ರೌಡಿಗಳಿಗೆ ತಾಕೀತು ಮಾಡಲು ದಿಢೀರ್ ದಾಳಿ ನಡೆಸುತ್ತಿದ್ದಾರೆ. ಇದೇ ರೀತಿ ಕೇಂದ್ರ ಹಾಗೂ ಪಶ್ಚಿಮ ವಿಭಾಗದ ಪೊಲೀಸರು ಕೂಡಾ ರೌಡಿಗಳ ಮನೆಗಳಲ್ಲಿ ಶೋಧ ನಡೆಸಿದ್ದರು.