ಹುಕ್ಕಾ ಬಾರ್‌ ಮೇಲೆ ದಾಳಿ ಮಾಡಿ 20 ಪ್ರಕರಣ ದಾಖಲಿಸಿದ ಪೊಲೀಸ್‌; ₹12.5 ಲಕ್ಷ ಮೌಲ್ಯದ ವಸ್ತು ಜಪ್ತಿ

| Published : Feb 28 2024, 02:35 AM IST / Updated: Feb 28 2024, 09:42 AM IST

ಹುಕ್ಕಾ ಬಾರ್‌ ಮೇಲೆ ದಾಳಿ ಮಾಡಿ 20 ಪ್ರಕರಣ ದಾಖಲಿಸಿದ ಪೊಲೀಸ್‌; ₹12.5 ಲಕ್ಷ ಮೌಲ್ಯದ ವಸ್ತು ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಅಕ್ರಮ ಹುಕ್ಕಾ ಬಾರ್‌ಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದ್ದು, ಮತ್ತೆ 20ಕ್ಕೂ ಹೆಚ್ಚು ಹುಕ್ಕಾ ಬಾರ್‌ಗಳನ್ನು ಪ್ರತ್ಯೇಕವಾಗಿ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಅಕ್ರಮ ಹುಕ್ಕಾ ಬಾರ್‌ಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದ್ದು, ಮತ್ತೆ 20ಕ್ಕೂ ಹೆಚ್ಚು ಹುಕ್ಕಾ ಬಾರ್‌ಗಳನ್ನು ಪ್ರತ್ಯೇಕವಾಗಿ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ರಾಜ್ಯದಲ್ಲಿ ಹುಕ್ಕಾ ನಿಷೇಧ ಬಳಿಕ ನಗರದ ಕೆಲವೆಡೆ ಕದ್ದು ಮುಚ್ಚಿ ನಡೆದಿರುವ ಹುಕ್ಕಾ ಬಾರ್‌ಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಅಂತೆಯೇ ಚಾಮರಾಜಪೇಟೆ, ಮಡಿವಾಳ, ಬೇಗೂರು, ಅಶೋಕನಗರ ಹಾಗೂ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 20 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

ದಾಳಿ ವೇಳೆ ಏಳು ಮಂದಿಯನ್ನು ಬಂಧಿಸಿ 12.5 ಲಕ್ಷ ರು. ಮೌಲ್ಯದ ಹುಕ್ಕಾ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಕ್ರಮವಾಗಿ ಹುಕ್ಕಾ ಬಾರ್‌ ನಡೆಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಚ್‌ಎಚ್‌ಎಲ್‌ ಬಳಿ ಹುಕ್ಕಾ ಬಾರ್‌ ಮಾಲಿಕರಾದ ಮಹಮ್ಮದ್‌ ಶಶೀರ್‌, ಮಹಮ್ಮದ್‌ ಶಾಮ್ಸ್‌, ಮಹಾಲಕ್ಷ್ಮೀ ಲೇಔಟ್‌ನ ಸೊಹೇಲ್‌ ಹಾಗೂ ಕೆ.ಆರ್‌.ಪುರದ ಇರ್ಫಾನ್‌ ಸೇರಿದಂತೆ ಏಳು ಮಂದಿಯನ್ನು ಸಿಸಿಬಿ ಬಂಧಿಸಿದೆ.