ಪಿಎಸ್‌ಐ ಪರಶುರಾಮ ನಿಗೂಢ ಸಾವು ಕೇಸ್‌ : ಸಿಐಡಿ ತನಿಖೆ ಆರಂಭ - ಯಾದಗಿರಿಗೆ ಆಗಮಿಸಿದ ತಂಡ

| Published : Aug 05 2024, 09:40 AM IST

Parashuram

ಸಾರಾಂಶ

ಯಾದಗಿರಿ ಪಿಎಸ್‌ಐ ಪರಶುರಾಮ (34) ಅವರ ನಿಗೂಢ ಸಾವಿನ ಕುರಿತ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ಪುನೀತ ನೇತೃತ್ವದ ತಂಡ ಭಾನುವಾರ ಯಾದಗಿರಿಗೆ ಆಗಮಿಸಿದೆ

ಯಾದಗಿರಿ :  ಯಾದಗಿರಿ ಪಿಎಸ್‌ಐ ಪರಶುರಾಮ (34) ಅವರ ನಿಗೂಢ ಸಾವಿನ ಕುರಿತ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ಪುನೀತ ನೇತೃತ್ವದ ತಂಡ ಭಾನುವಾರ ಯಾದಗಿರಿಗೆ ಆಗಮಿಸಿದೆ. ಇಲ್ಲಿನ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ತಂಡ, ಎಫ್‌ಐಆರ್‌ ಪ್ರತಿ, ಪಂಚನಾಮೆ ವರದಿ ಸೇರಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದೆ. ಪೆನ್‌ಡ್ರೈವ್‌ ಸೇರಿ ಹಲವು ಕಡತಗಳನ್ನು ವಶಕ್ಕೆ ಪಡೆದಿದೆ.

ಅವಧಿಪೂರ್ವ ವರ್ಗಾವಣೆ ತಡೆಯಲು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಹಾಗೂ ಪುತ್ರ ಸನ್ನೀಗೌಡ (ಪಂಪನಗೌಡ) ಅವರು ತಮ್ಮ ಪತಿ ಪರಶುರಾಮಗೆ 30 ಲಕ್ಷ ರು.ಗಳಿಗೆ ಬೇಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿ, ಅವರು ಸಾವನ್ನಪ್ಪಿದ್ದಾರೆ ಎಂದು ಪರಶುರಾಮ ಅವರ ಪತ್ನಿ ಶ್ವೇತಾ ದೂರು ನೀಡಿದ್ದು, ಶಾಸಕ ಹಾಗೂ ಅವರ ಪುತ್ರನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ, ದೂರವಾಣಿ ಕರೆ, ಹಣದ ವ್ಯವಹಾರ ಕುರಿತು ಪರಿಶೀಲನೆ ನಡೆಸಲು ಅವರ ಮೊಬೈಲ್‌ ಕಾಲ್‌ ರೆಕಾರ್ಡಿಂಗ್‌ ಮತ್ತು ಕರೆಗಳನ್ನು ಪರಿಶೀಲಿಸಲು ಸಿಐಡಿ ತಂಡ ಮುಂದಾಗಲಿದೆ. ಅಲ್ಲದೆ, ಸೋಮವಾರ ಪರಶುರಾಮ ಅವರ ಆಪ್ತರು, ಪಿಎಸ್‌ಐ ತಂದೆ, ಮಾವ ಅವರನ್ನು ಭೇಟಿಯಾಗಿ, ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಶಾಸಕ ಚೆನ್ನಾರೆಡ್ಡಿ ಅವರ ಮನೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಇದೇ ವೇಳೆ, ತಪ್ಪಿತಸ್ಥ