ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಸೋಮನಹಳ್ಳಿ ಸಮೀಪದ ಸಿಪಾಯಿ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಯುವಕರ ಗುಂಪಿನ ಮಾರಕಾಸ್ತ್ರಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಚೇತನ್ ಶಸ್ತ್ರ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾನೆ.ಯುವಕರ ಗುಂಪು ಲಾಂಗ್ ಮತ್ತು ಮಚ್ಚಿನ ದಾಳಿಯಿಂದ ಚೇತನ ಎರಡು ಕೈಗಳಿಗೆ ಮತ್ತು ತಲೆಗೆ ತೀವ್ರವಾಗಿ ಗಾಯವಾಗಿತ್ತು. ಮೈಸೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನನ್ನು 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ಸಿಪಾಯಿ ರೆಸ್ಟೋರೆಂಟ್ ಮ್ಯಾನೇಜರ್ ದಿಲೀಪ್ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಿಪಾಯಿ ರೆಸ್ಟೋರೆಂಟ್ ನಲ್ಲಿ ಹೊರಗಿನಿಂದ ತಂದು ಮಧ್ಯ ಸೇವನೆ ಮಾಡುವ ವಿಚಾರದಲ್ಲಿ ಕೆಲ ಯುವಕರ ನಡುವೆ ಭಾನುವಾರ ರಾತ್ರಿ ಗಲಾಟೆ ಆಗಿತ್ತು.ಆ ನಂತರ ಈ ದ್ವೇಷದ ಹಿನ್ನೆಲೆಯಲ್ಲಿ ಕಾರಿನಲ್ಲಿ ಬಂದ ಯುವಕರ ಹತ್ತು ಮಂದಿ ಬೆಂಬಲಿಗರು ಚೇತನ್ ಮತ್ತು ದಿಲೀಪ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೇ ನಡೆಸಿ ಮೇಲೆ ಪರಾರಿಯಾಗಿದ್ದರು. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಮದ್ದೂರು ಪೊಲೀಸರು ಸಿಪಾಯಿ ರೆಸ್ಟೋರೆಂಟ್ ನಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಟಿವಿಗಳ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಹಳ್ಳಕ್ಕೆ ಉರುಳಿದ ಗೂಡ್ಸ್ ಲಾರಿ, ಚಾಲಕ ಪ್ರಾಣಾಪಾಯದಿಂದ ಪಾರುಶ್ರೀರಂಗಪಟ್ಟಣ:
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿದ ಘಟನೆ ಮಂಗಳವಾರ ಮುಂಜಾನೆ ತಾಲೂಕಿನ ದರಸಗುಪ್ಪೆ ಗ್ರಾಮದ ಬಳಿ ನಡೆದಿದೆ.ಹಾವೇರಿಯಿಂದ ತಮಿಳುನಾಡಿಗೆ ವೇಸ್ಟ್ ಪೇಪರ್ ಸಾಗಿಸುತ್ತಿದ್ದ ಗೂಡ್ಸ್ ಲಾರಿಗೆ ಅಡ್ಡಲಾಗಿ ವಾಹನ ಬಂದಿದ್ದರಿಂದ ಅಪಘಾತ ತಪ್ಪಿಸಲು ಚಾಲಕ ತನ್ನ ವಾಹನವನ್ನು ಎಡಬದಿಗೆ ಸರಿಸಿದ್ದಾನೆ. ಈ ವೇಳೆ ಲಾರಿ ಪಲ್ಟಿಯಾಗಿ ಹಳ್ಳಕ್ಕೆ ಉರುಳಿದೆ.
ಜೊತೆಗೆ ಹೆದ್ದಾರಿ ಸಂಪೂರ್ಣವಾಗಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರು ಗುಂಡಿಗಳನ್ನ ತಪ್ಪಿಸುವ ಸಲುವಾಗಿ ಎಡ-ಬಲ ಎನ್ನದೆ ತಮ್ಮ ವಾಹನಗಳನ್ನು ಚಲಾಯಿಸುತ್ತಾರೆ. ಹಾಗಾಗಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಘಟನೆಯಿಂದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.