ಸಾರಾಂಶ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜೈಲಿನಲ್ಲಿರುವ ನಟ ದರ್ಶನ್‌ನ ಮೂವರು ಸಹಚರರಿಗೆ ಜಾಮೀನು ಮಂಜೂರಾದರೂ ಬುಧವಾರ ಬಿಡುಗಡೆ ಭಾಗ್ಯ ಸಿಗಲಿಲ್ಲ.
ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜೈಲಿನಲ್ಲಿರುವ ನಟ ದರ್ಶನ್‌ನ ಮೂವರು ಸಹಚರರಿಗೆ ಜಾಮೀನು ಮಂಜೂರಾದರೂ ಬುಧವಾರ ಬಿಡುಗಡೆ ಭಾಗ್ಯ ಸಿಗಲಿಲ್ಲ.
ಬೆಂಗಳೂರಿನ ಗಿರಿನಗರದವರಾದ ಆರ್.ಕೇಶವಮೂರ್ತಿ(27), ವಿ.ಕಾರ್ತಿಕ್(27) ಮತ್ತು ಬಿ.ಜಿ.ರೋಡ್‌ನ ಎಲ್. ನಿಖಿಲ್ ನಾಯಕ್(21)ಗೆ ಹೈಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ನೀಡಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಗಳು ಬುಧವಾರ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಈ ಹಿನ್ನೆಲೆಯಲ್ಲಿ ಇವರ ಸಂಬಂಧಿಕರು ಜೈಲಿನ ಹೊರಗೆ ಕಾಯುತ್ತಿದ್ದರು. ಆದರೆ, ಆದೇಶದ ಪ್ರತಿ ಸಿಗದ ಹಿನ್ನೆಲೆಯಲ್ಲಿ ಮೂವರೂ ಗುರುವಾರ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.