ಟಿಪ್ಪರ್ ಲಾರಿ, ಮಾರುತಿ ಓಮ್ನಿ ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತವಾಗಿ ಓರ್ವ ವಿದ್ಯಾರ್ಥಿ ಮೃತಪಟ್ಟು, ಮತ್ತೋರ್ವ ವಿಧ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು-ಬೆಂಗಳೂರು ಹೆದ್ದಾರಿಯ ಕೋಡಿಶೆಟ್ಟಿಪುರ ಬಳಿ ನಡೆದಿದೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಟಿಪ್ಪರ್ ಲಾರಿ, ಮಾರುತಿ ಓಮ್ನಿ ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತವಾಗಿ ಓರ್ವ ವಿದ್ಯಾರ್ಥಿ ಮೃತಪಟ್ಟು, ಮತ್ತೋರ್ವ ವಿಧ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು-ಬೆಂಗಳೂರು ಹೆದ್ದಾರಿಯ ಕೋಡಿಶೆಟ್ಟಿಪುರ ಬಳಿ ನಡೆದಿದೆ.

ಯಲಿಯೂರು ಗ್ರಾಮದ ತಮ್ಮ ಅಜ್ಜಿ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದ ಮೂಲತಃ ತುಮಕೂರಿನ ತೇಜಸ್ (15) ಸ್ಥಳದಲ್ಲಿ ಮೃತಪಟ್ಟ ವಿದ್ಯಾರ್ಥಿ. ಮಂಡ್ಯ ನಿವಾಸಿ ಜೀವನ್ (15) ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಗಾಯಾಳು ಜೀವನ್ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಟಿಪ್ಪರ್ ಚಾಲಕನ ಅತಿ ವೇಗದಿಂದ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ, ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಮಂಡ್ಯ:

ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮದ್ದೂರಿನ ರೈಲ್ವೆ ಯಾರ್ಡ್ ಬಳಿ ನಡೆದಿದೆ. ಸುಮಾರು ೩೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ೫.೬ ಅಡಿ ಎತ್ತರ, ಡುಂದನೆ ಮುಖ, ದೃಢಕಾಯ ಶರೀರ, ಗೋ ಮೈಬಣ್ಣ, ಮುಖ ಹೊಡೆದುಹೋಗಿರುತ್ತದೆ. ತಲೆಯಲ್ಲಿ ಕೂದಲು ಬೋಳಿಸಿದ್ದು, ಕಪ್ಪು ಬಣ್ಣದ ಮೀಸೆ, ಗಡ್ಡ ಬಿಟ್ಟಿರುತ್ತಾನೆ. ಮೆರೂನ್ ಬಣ್ಣದ ಫುಲ್ ಓವರ್ ಸಿಮೆಂಟ್ ಬಣ್ಣದ ಟೀ-ಶರ್ಟ್, ನೈಟ್ ಪ್ಯಾಂಟ್, ಕಪ್ಪು ಬಣ್ಣದ ಚಪ್ಪಲಿ, ತಲೆಗೆ ಕಪ್ಪು ಬಣ್ಣದ ಟೋಪಿ ಧರಿಸಿದ್ದಾನೆ. ಈತನ ವಾರಸುದಾರರಿದ್ದಲ್ಲಿ ತಕ್ಷಣ ರಾಲ್ವೆ ಪೊಲೀಸ್ ಠಾಣೆ, ದೂ.ಸಂಖ್ಯೆ ೦೮೨೧-೨೫೧೬೫೭೯, ೯೪೮೦೮೦೨೧೨೨ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.