ಕರ್ಕಶ ಶಬ್ದ ಸೈಲೆನ್ಸರ್‌: 1510 ಕೇಸ್‌

| Published : Feb 08 2024, 01:36 AM IST

ಸಾರಾಂಶ

ಕರ್ಕಶ ಶಬ್ಧ ಹೊರಡಿಸುತ್ತಿದ್ದ ಬೈಕ್‌ ಸೈಲೆನ್ಸರ್‌, ದೋಷಪೂರಿತ ನಂಬರ್‌ ಪ್ಲೇಟ್‌ ಬಳಕೆ ವಿರುದ್ಧ ಬೆಂಗಳೂರು ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ಕಶ ಹಾರ್ನ್, ದೋಷಪೂರಿತ ಸೈಲೆನ್ಸರ್‌, ನಂಬರ್ ಪ್ಲೇಟ್ ಮರೆಮಾಚುವುದು ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಬಳಸಿದವರಿಗೆ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರದಲ್ಲಿ ಎರಡು ದಿನಗಳು ವಿಶೇಷ ಕಾರ್ಯಾಚರಣೆ ನಡೆಸಿ ಪೊಲೀಸರು ದಂಡ ವಿಧಿಸಿದ್ದಾರೆ. ಕರ್ಕಶ ಹಾರ್ನ್‌-483 ಪ್ರಕರಣ, ದೋಷಪೂರಿತ ಸೈಲೆನ್ಸರ್‌- 137 ಹಾಗೂ ದೋಷಪೂರಿತ ನಂಬರ್ ಫ್ಲೇಟ್- ನಂಬರ್ ಫ್ಲೇಟ್ ಮರೆಮಾಚುವುದು- 890 ಸೇರಿ ಒಟ್ಟು 1510 ಪ್ರಕರಣಗಳನ್ನು ಸಂಚಾರ ವಿಭಾಗದ ಪೊಲೀಸರು ದಾಖಲಿಸಿದ್ದಾರೆ.

ರಸ್ತೆ ಸುರಕ್ಷತೆ ಸಪ್ತಾಹ ಅಂಗವಾಗಿ

ಆರ್‌ಟಿಒ ಕಚೇರಿಯಲ್ಲಿ ರಕ್ತದಾನ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024ರ ಅಂಗವಾಗಿ ಕಸ್ತೂರಿ ನಗರದಲ್ಲಿನ ಬೆಂಗಳೂರು ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬುಧವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶ್ರೀನಿವಾಸ್ ಪ್ರಸಾದ್ ರಕ್ತದಾನ ಶಿಬಿರ ಉದ್ಘಾಟಿಸಿ, ರಸ್ತೆ ಸುರಕ್ಷತೆ ಮತ್ತು ರಕ್ತದಾನದ ಮಹತ್ವವನ್ನು ವಿವರಿಸಿದರು. ಹೆಚ್ಚಿನ ಸಂದರ್ಭದಲ್ಲಿ ಅಪಘಾತಗಳು ಅಜಾಗರೂಕತೆ ಮತ್ತು ರಸ್ತೆ ಸುರಕ್ಷತೆಯ ಅರಿವಿನ ಕೊರತೆಯಿಂದ ಉಂಟಾಗುತ್ತದೆ. ರಸ್ತೆ ಸುರಕ್ಷತೆಯ ಕುರಿತು ಅರಿವು ಇರುವುದರಿಂದ ರಸ್ತೆ ಅಪಘಾತ ಕಡಿಮೆ ಮಾಡಿ, ಸಾವು-ನೋವುಗಳನ್ನು ತಡೆಯಬಹುದು. ಅದೇ ರೀತಿ ರಕ್ತದಾನವು ಜೀವ ಉಳಿಸುವ ಕಾರ್ಯವಾಗಿದೆ ಎಂದರು.

ಸಂಕಲ್ಪ ಇಂಡಿಯಾ ಫೌಂಡೇಷನ್‌ನ ನರಸಿಂಹ ಶಾಸ್ತ್ರಿ, ಡಾ। ಗಿರೀಶ್‌ ಇದ್ದರು.ರಸ್ತೆ ವಿಭಜಕಕ್ಕೆ ಸ್ಕೂಟರ್‌ಡಿಕ್ಕಿಯಾಗಿ ಸವಾರ ಸಾವುಕನ್ನಡಪ್ರಭ ವಾರ್ತೆ ಬೆಂಗಳೂರುರಸ್ತೆ ವಿಭಜಕಕ್ಕೆ ಸ್ಕೂಟರ್‌ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ವಿ.ಕಲ್ಲಹಳ್ಳಿ ಗ್ರಾಮದ ಮಂಜುನಾಥ್ (38) ಮೃತ ವ್ಯಕ್ತಿ. ಟ್ರ್ಯಾಕ್ಟರ್ ಚಾಲಕರಾಗಿದ್ದ ಮಂಜುನಾಥ್‌, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿಲ್ಲಿದ್ದ ತಮ್ಮ ಅತ್ತೆ ಮನೆಗೆ ಸ್ನೇಹಿತ ಗಣೇಶ್ ಜತೆ ಹೋಗಿದ್ದರು. ಅಲ್ಲಿಂದ ಎರಡು ಸ್ಕೂಟರ್‌ಗಳಲ್ಲಿ ಪ್ರತ್ಯೇಕವಾಗಿ ಗೆಳೆಯರು ಮನೆಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ರಾಣಿ ಕ್ರಾಸ್ ಬಳಿ ಸ್ಕೂಟರ್‌ ತಿರುವು ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಮಂಜುನಾಥ್ ಗುದ್ದಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.