ಸಾರಾಂಶ
ಚನ್ನರಾಯಪಟ್ಟಣ ಮುಖ್ಯರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂಭಾಗದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಕೆ.ಆರ್.ಪೇಟೆ : ಪಟ್ಟಣದ ಚನ್ನರಾಯಪಟ್ಟಣ ಮುಖ್ಯರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂಭಾಗದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಹಳೇ ನಂದೀಪುರ ಗ್ರಾಮದ ಮಹದೇವರ ಪುತ್ರ ಪ್ರವೀಣ್ ಕುಮಾರ್(22) ಕೊಲೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪ್ರವೀಣ್ ಕುಮಾರ್ ಈಕ್ವಿಟಾಸ್ ಫೈನಾನ್ಸ್ ಕಂಪನಿ ಉದ್ಯೋಗಿಯಾಗಿದ್ದು, ಭಾನುವಾರ ರಾತ್ರಿ ಎಚ್.ಡಿ.ಎಫ್.ಸಿ ಬ್ಯಾಂಕಿನ ಸೆಕ್ಯೂರಟಿ ಗಾರ್ಡ್ ಬ್ಯಾಂಕ್‌ನ ಹಿಂಬದಿಗೆ ಹೋದಾಗ ಯುವಕನ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಪಟ್ಟಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಆನಂದೇಗೌಡ, ಪಿ.ಎಸ್.ಐ ನವೀನ್ ಸ್ಥಳ ಮಹಜರು ನಡೆಸಿ ಶವವನ್ನು ವಶಕ್ಕೆ ಪಡೆದು ಶವ ಪರೀಕ್ಷೆಗೆ ಕಳುಹಿಸಿದ್ದರು. ಮೃತ ಯುವಕನ ತಾಯಿ ಪ್ರಭಾವತಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ಭಾನುವಾರ ಸಂಜೆ ತಾಲೂಕಿನ ಮಡುವಿನಕೋಡಿ ಗ್ರಾಮದ ಮದುಸೂಧನ್ ಮತ್ತು ಬಂಡೀಹೊಳೆ ಗ್ರಾಮದ ಕಿಟ್ಟಣ್ಣ (ಕೃಷ್ಣೇಗೌಡ) ತಮ್ಮ 8 ಜನ ಸ್ನೇಹಿತರೊಂದಿಗೆ ನಮ್ಮ ಮನೆ ಬಳಿ ಬಂದು ಎಲ್ಲಿ ನಿನ್ನ ಮಗ ಅವನನ್ನು ಕೊಲೆ ಮಾಡಿ ಹೇಮಗಿರಿ ಹೊಳೆಗೆ ಎಸೆಯುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿದ್ದರು. ಅದರಂತೆ ನನ್ನ ಮಗನ ಶವ ಕಂಡು ಬಂದಿದೆ. ನನ್ನ ಮಗನ ಕೊಲೆಗೆ ಮದುಸೂಧನ್, ಕಿಟ್ಟಣ್ಣ ಮತ್ತು ಅವನ ಸಂಗಡಿಗರು ಕಾರಣ ಎಂದು ದೂರು ನೀಡಿದ್ದಾರೆ.
ಮೃತ ಯುವಕನ ತಾಯಿ ಪ್ರಭಾವತಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪಟ್ಟಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಎತ್ತಿನಗಾಡಿಗೆ ಡಿಕ್ಕಿ ಬೈಕ್ ಸವಾರ ಸಾವು
ಮಳವಳ್ಳಿ:ಎತ್ತಿನಗಾಡಿಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ನೆಲಮಾಕನಹಳ್ಳಿ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ.
ವಿಜಯಪುರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಪ್ಪಯ್ಯಹಳ್ಳಿ ತಾಂಡದ ನಿವಾಸಿ ವಿ.ರಮೇಶ್ ನಾಯಕ್ (30) ಮೃತಪಟ್ಟರು.ಕಬ್ಬಿನ ಕಟಾವಿಗೆ ವಿಜಯಪುರ ಜಿಲ್ಲೆಯಿಂದ ಕುಟುಂಬ ಸಮೇತ ವಿ.ರಮೇಶ್ ನಾಯಕ್ ತಾಲೂಕಿನ ದೇವಿಪುರ ಗ್ರಾಮದಲ್ಲಿ ಉಳಿದುಕೊಂಡಿದ್ದರು. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಭಾನುವಾರ ರಾತ್ರಿ ನೆಲಮಾಕನಹಳ್ಳಿ ಗೇಟ್ ಬಳಿ ಎತ್ತಿನಗಾಡಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಬೈಕ್ ಸವಾರ ವಿ.ರಮೇಶ್ ನಾಯಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.