ಸಾರಾಂಶ
ಹೆಣ್ಣು ಮಗುವನ್ನು ಅಪಹರಿಸಿ ಬಾಲಕಿಯ ಕೈ-ಕಾಲು, ಬಾಯಿಯನ್ನು ಪ್ಲಾಸ್ಟರ್‌ನಿಂದ ಕಟ್ಟಿ ಸಿಮೆಂಟ್ ಗೋದಾಮಿನಿನಲ್ಲಿ ಇರಿಸಿದ್ದ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿ, ಮಗುವನ್ನು ರಕ್ಷಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ: ಹಣಕ್ಕಾಗಿ ಪಕ್ಕದ ಮನೆಯ 5 ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಬಾಲಕಿಯ ಕೈ-ಕಾಲು, ಬಾಯಿಯನ್ನು ಪ್ಲಾಸ್ಟರ್‌ನಿಂದ ಕಟ್ಟಿ ಸಿಮೆಂಟ್ ಗೋದಾಮಿನಿನಲ್ಲಿ ಇರಿಸಿದ್ದ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿ, ಮಗುವನ್ನು ರಕ್ಷಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ. ದರ್ಶನ್(೨೨) ಬಂಧಿತ ಆರೊಪಿ.
ಏನಿದು ಘಟನೆ?: ಭಾನುವಾರ ರಾತ್ರಿ ಗಣೇಶನನ್ನು ಕೂರಿಸಿದ್ದ ಶಾಮಿಯಾನ ಬಳಿ ಆಟವಾಡುತ್ತಿದ್ದ ಮಗುವನ್ನು ದರ್ಶನ್ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಗುವಿನ ತಂದೆ ಸಂತೋಷ್‌ಗೆ ಕರೆ ಮಾಡಿ 2 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದ. ಪೋಷಕರು ಪೆಂಡಾಲ್ ಬಳಿ ಬಂದು ಮಗುವಿಗಾಗಿ ಹುಡುಕಾಟ ನಡೆಸಿದಾಗ, ಅಲ್ಲಿದ್ದ ಯುವಕರು ದರ್ಶನ್ ಮಗು ಜತೆ ಅನುಮಾಸ್ಪದವಾಗಿ ತೆರಳಿದ ವಿಚಾರ ತಿಳಿಸಿದ್ದಾರೆ. ಬಳಿಕ ಪೆಂಡಾಲ್ ಬಳಿಯಿಂದ ಅರ್ಧ ಕಿ.ಮೀ. ದೂರದಲ್ಲಿದ್ದ ಸಿಮೆಂಟ್ ಗೋದಾಮಿನಲ್ಲಿ ಮಗು ಪತ್ತೆಯಾಗಿದೆ.