ಸಾರಾಂಶ
ಮನೆ ಬಾಗಿಲಿನ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ನಗದು, ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಕ್ಯಾತೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮತ್ತೊಂದು ಪ್ರಕರಣ ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮಳವಳ್ಳಿ : ಮನೆ ಬಾಗಿಲಿನ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ನಗದು, ಚಿನ್ನ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕ್ಯಾತೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುರೇಶ್ ಕುಟುಂಬ ಸಮೇತ ಸಂಬಂಧಿಕರ ಗೃಹಪ್ರವೇಶಕ್ಕೆ ಮಳವಳ್ಳಿಗೆ ತೆರಳಿದ್ದ ವೇಳೆ ಒಳನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 20 ಸಾವಿರ ನಗದು, ಎರಡು ಬೆಳ್ಳಿಯ ದೀಪಾಲೆ ಕಂಬಗಳು ಹಾಗೂ 2 ಗ್ರಾಂ ಚಿನ್ನದ ಕಾಸುಗಳನ್ನು ಕದ್ದು ಪರಾರಿಯಾಗಿದ್ದಾರೆ. ಸಂಜೆ ಮನೆಗೆ ಪರಿಶೀಲಿಸಿದ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಡಹಗಲೇ ಮನೆಗೆ ನುಗ್ಗಿರುವ ಕಳ್ಳರು
ಮಳವಳ್ಳಿ: ಹಾಡಹಗಲೇ ಮನೆಗೆ ನುಗ್ಗಿರುವ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪುಟ್ಟವೆಂಕಟಯ್ಯ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಪುಟ್ಟವೆಂಕಟಯ್ಯ ಊಟಕ್ಕೆಂದು ಹೊರಗಡೆ ಹೋಗಿದ್ದ ವೇಳೆ ಬಾಗಿಲಿನ ಚಿಲಕ ತೆಗೆದು ಒಳನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಸರ, ಮಗಳ ಕುತ್ತಿಗೆಯ ಚಿನ್ನದ ಸರ, ಎರಡು ಉಂಗುರ, ಎರಡು ಜೊತೆ ಕಿವಿಯ ಚಿನ್ನದ ಸೇರಿ ಸುಮಾರು 4 ಲಕ್ಷದ 90 ಸಾವಿರ ರು.ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಪುಟ್ಟವೆಂಕಟಯ್ಯ ದೂರು ನೀಡಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.