ಪತಿ ಅನ್ಯ ಯುವತಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ನೇಣು ಬಿಗಿದು ಆತ್ಮಹತ್ಯೆ..!

| N/A | Published : Feb 11 2025, 12:48 AM IST / Updated: Feb 11 2025, 04:25 AM IST

ಪತಿ ಅನ್ಯ ಯುವತಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ನೇಣು ಬಿಗಿದು ಆತ್ಮಹತ್ಯೆ..!
Share this Article
  • FB
  • TW
  • Linkdin
  • Email

ಸಾರಾಂಶ

ಪತಿ ಅನ್ಯ ಯುವತಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ. ವೈಭವ್ ಫಿಟ್ನೆಸ್ ಜಿಮ್ ಮಾಲೀಕ ಗಿರೀಶ್ ಪತ್ನಿ ಎಂ.ಜೆ.ದಿವ್ಯ ಆತ್ಮಹತ್ಯೆಗೆ ಶರಣಾದ ಗೃಹಣಿ.

 ಮದ್ದೂರು : ಪತಿ ಅನ್ಯ ಯುವತಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ.ಗ್ರಾಮದ ವೈಭವ್ ಫಿಟ್ನೆಸ್ ಜಿಮ್ ಮಾಲೀಕ ಗಿರೀಶ್ ಪತ್ನಿ ಎಂ.ಜೆ.ದಿವ್ಯ (27) ಆತ್ಮಹತ್ಯೆಗೆ ಶರಣಾದ ಗೃಹಣಿ.

ಕೆಸ್ತೂರು ರಸ್ತೆಯ ಬೊಮ್ಮನಾಯನಹಳ್ಳಿ ರಸ್ತೆಯಲ್ಲಿ ಪತ್ನಿಯೊಂದಿಗೆ ಜಿಮ್ ನಡೆಸುತ್ತಿದ್ದ ಗಿರೀಶ್ ಆತಗೂರು ಹೋಬಳಿಯ ಮಾಚಹಳ್ಳಿ ಗ್ರಾಮದ ದಿವ್ಯಳನ್ನು 2016ರಲ್ಲಿ ವಿವಾಹವಾಗಿದ್ದನು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಈ ಮಧ್ಯೆ ಗಿರೀಶ ಬಸವಲಿಂಗನದೊಡ್ಡಿ ಗ್ರಾಮದ ಬೇರೊಂದು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಈ ವಿಚಾರವಾಗಿ ದಂಪತಿಯ ಎರಡು ಕುಟುಂಬಗಳ ನಡುವೆ ಕಲಹ ನಡೆದು ಕೆಸ್ತೂರು ಠಾಣೆಯಲ್ಲಿ ನ್ಯಾಯ ಪಂಚಾಯ್ತಿ ನಡೆದಿತ್ತು.

ಈ ವೇಳೆ ಗಿರೀಶ ಅನ್ಯ ಯುವತಿಯೊಂದಿಗೆ ಸಂಬಂಧ ಕೈ ಬಿಟ್ಟು ಪತ್ನಿ ದಿವ್ಯಳೊಂದಿಗೆ ಹೊಂದಾಣಿಕೆಯಿಂದ ಜೀವನ ನಡೆಸುವಂತೆ ತೀರ್ಮಾನವಾಗಿತ್ತು. ದಿವ್ಯ ಮತ್ತೆ ಸಂಸಾರ ನಡೆಸುತ್ತಾ ಜಿಮ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಕಳೆದ ಒಂದೂವರೆ ತಿಂಗಳ ಹಿಂದೆ ಗಿರೀಶ ಯುವತಿಯ ಪ್ರೇಮಕ್ಕೆ ಮಾರು ಹೋಗಿ ನಾಪತ್ತೆಯಾಗಿದ್ದರು. ಇದರಿಂದ ಬೇಸತ್ತ ದಿವ್ಯ ಸೋಮವಾರ ಮಧ್ಯಾಹ್ನ ಜಿಮ್‌ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿವ್ಯಳನ್ನು ಗಿರೀಶ ಹೊಡೆದು ಕೊಲೆ ಮಾಡಿ ನೇಣು ಹಾಕಿ ಪರಾರಿಯಾಗಿದ್ದಾನೆ ಎಂದು ಆಕೆ ಪೋಷಕರು, ಸಂಬಂಧಿಕರು ಆರೋಪಿಸಿ ಜಿಮ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಸಿಕೊಳಿಸಿದರು.

ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ಕೃಷ್ಣಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ ಬೆಟ್ಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಳ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಶವ ಪರೀಕ್ಷೆಗಾಗಿ ರವಾನಿಸಲಾಗಿದೆ.