ಜಿಂಕೆ ಮಾಂಸ ಸಾಗಾಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳು, ಸಿಬ್ಬಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಕರಲಕಟ್ಟೆ ಸಮೀಪ ನಡೆದಿದೆ. ಸಮೀಪದ ಮಡಹಳ್ಳಿ ಸುರೇಶ್ ಬಂಧಿತ ಆರೋಪಿ.
ಕನ್ನಡಪ್ರಭ ವಾರ್ತೆ ಹಲಗೂರು
ಜಿಂಕೆ ಮಾಂಸ ಸಾಗಾಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳು, ಸಿಬ್ಬಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಕರಲಕಟ್ಟೆ ಸಮೀಪ ನಡೆದಿದೆ.ಸಮೀಪದ ಮಡಹಳ್ಳಿ ಸುರೇಶ್ ಬಂಧಿತ ಆರೋಪಿ. ಶಿಂಷಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯವರಿಗೆ ವ್ಯಕ್ತಿಯೊಬ್ಬ ಬಿಳಿಯ ದ್ವಿ-ಚಕ್ರ ವಾಹನದಲ್ಲಿ ಕಾಡು ಪ್ರಾಣಿ ಮಾಂಸ ಸಾಗಾಟ ಮಾಡುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು ದಕ್ಷಿಣ ವಿಭಾಗ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಕನಕಪುರ ವನ್ಯಜೀವಿ ಉಪ ವಿಭಾಗ ರವರ ಮಾರ್ಗದರ್ಶನದಂತೆ ವಲಯ ಅರಣ್ಯಾಧಿಕಾರಿ ಪ್ರಮೋದ್ ಕುಮಾರ್ ದೇವ್, ಉಪವಲಯ ಅರಣ್ಯಾಧಿಕಾರಿ ಸಾಂಜು ಪ್ರಾನ್ಸಿಸ್, ಗಸ್ತು ಅರಮ್ಯ ಪಾಲಕ ಪುನೀತ್, ವಾಹನ ಚಾಲಕ ಚೇತನ್ ಮತ್ತು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಸುರೇಶ್, ಪ್ರದೀಪ್ ಮತ್ತು ಪ್ರಜ್ವಲ್ ಅವರು ಕರಲಕಟ್ಟೆ ಹೋಗುವ ಮಾರ್ಗ ಮಧ್ಯ ಕಾದು ಕುಳಿತು ಆರೋಪಿ ಸುರೇಶ್ ಆತನನ್ನು ಹಿಡಿದು ಸ್ಕೂಟರ್ನ ಮುಂಭಾಗದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಬ್ಯಾಗ್ನಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ಗಳಿಂದ ಕಟ್ಟಿರುವ ಪೊಟ್ಟಣಗಳನ್ನು ಪರಿಶೀಲಿಸಿದಾಗ ಮಾಂಸದ ತುಂಡುಗಳು ಇರುವುದು ಕಂಡುಬಂದಿದೆ.
ತಕ್ಷಣ ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಜಿಂಕೆ ಮಾಂಸ ಎಂದು ಒಪ್ಪಿಕೊಂಡಿದ್ದಾನೆ. ನನಗೆ ನಮ್ಮ ಗ್ರಾಮದ ಲೋಕೇಶ್ ನಿನ್ನೆ ರಾತ್ರಿ ಕಾಡಿಗೆ ಹೋಗಿ ಜಿಂಕೆ ಬೇಟೆಯಾಡಿ ಅದರ ಮಾಂಸದ ಪೀಸುಗಳನ್ನು ಒಂದು ಕೆಜಿ ತೂಕದಲ್ಲಿ 12 ಕವರುಗಳಲ್ಲಿ ಹಾಕಿ ನೀನು ಕರಲಕಟ್ಟೆ ಸರ್ಕಲ್ಗೆ ತೆಗೆದುಕೊಂಡು ಹೋಗಿ ಗೌಪ್ಯವಾಗಿ ಮಾರಾಟ ಮಾಡಿ ಬರುವಂತೆ ಮಾಂಸದ ಪ್ಯಾಕೆಟ್ ಗಳನ್ನು ನೀಡಿದ್ದಾ ನಾವು ಹಣ ಗಳಿಸುವ ಉದ್ದೇಶದಿಂದ ನಾನು ಮಾಂಸ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ.ಸದರಿ ಪೊಟ್ಟಣಗಳಲ್ಲಿ ತಲಾ ಒಂದು ಕೆಜಿಯಂತೆ 12 ಪೊಟ್ಟಣಗಳಿದ್ದು, ಒಟ್ಟು 12 ಕೆಜಿ ಜಿಂಕೆ ಮಾಂಸ ಇರುವುದನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡು ಆರೋಪಿ ಮೇಲೆ ವನ್ಯಜೀವಿ (ರಕ್ಷಣೆ) ಕಾಯ್ದೆ 1972 ರ ಉಲ್ಲಂಘನೆ ಅನ್ವಯ ವನ್ಯಜೀವಿ ಅಪರಾಧ ಕೇಸು ದಾಖಲು ಮಾಡಿಕೊಂಡು ಮತ್ತೊರ್ವ ಆರೋಪಿ ತಲೆ ಮರೆಸಿಕೊಂಡಿರುವ ಮಡಹಳ್ಳಿಯ ಲೋಕೇಶ್ ನ ಶೋಧನೆಗಾಗಿ ಅರಣ್ಯ ಇಲಾಖೆ ಕಾರ್ಯ ಪ್ರವೃತ್ತರಾಗಿದ್ದಾರೆ.
ಆರೋಪಿ ಸುರೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ದ್ವಿ- ಚಕ್ರ ವಾಹನವನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.