ಪೆಂಡೆಂಟ್ ನಲ್ಲಿ ಹುಲಿ ಉಗುರು
KannadaprabhaNewsNetwork | Published : Oct 28 2023, 01:15 AM IST
ಪೆಂಡೆಂಟ್ ನಲ್ಲಿ ಹುಲಿ ಉಗುರು
ಸಾರಾಂಶ
ಜ್ಯುವಲರಿ ಮಾಲೀಕರೊಬ್ಬರು ಹುಲಿ ಉಗುರು ಧರಿಸಿರುವ ಫೋಟೋವನ್ನು ಜಾಹಿರಾತಿಗೆ ನೀಡಿದ್ದು ವೈರಲ್ ಆಗಿದೆ.
ಕನ್ನಡಪ್ರಭ ವಾರ್ತೆ, ತುಮಕೂರು ಜ್ಯುವಲರಿ ಮಾಲೀಕರೊಬ್ಬರು ಹುಲಿ ಉಗುರು ಧರಿಸಿರುವ ಫೋಟೋವನ್ನು ಜಾಹಿರಾತಿಗೆ ನೀಡಿದ್ದು ವೈರಲ್ ಆಗಿದೆ. ತುಮಕೂರಿನ ವಿಶ್ವಾಸ ಜ್ಯುವಲರಿ ಮಾಲೀಕ ವಿಶ್ವಾಸ್ ಹುಲಿ ಉಗುರಿನ ಪೆಂಡೆಂಟ್ ಧರಿಸಿ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗಿದ್ದು ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವರೆ ಎಂಬ ಚರ್ಚೆ ಆರಂಭವಾಗಿದೆ. ತುಮಕೂರು ನಗರದಲ್ಲಿ ಹಾಕಲಾಗಿರುವ ಜಾಹಿರಾತು ಫಲಕಗಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಫೋಟೋಗಳು ರಾರಾಜಿಸುತ್ತಿದೆ. ಈ ಹಿಂದೆ ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭಾಶಯ ಕೋರಲು ಹಾಕಿದ್ದ ಫ್ಲೆಕ್ಸ್ ಗಳಲ್ಲಿ ಹುಲಿ ಉಗುರಿನ ಫೋಟೋ ಇರುವುದು ವೈರಲ್ ಆಗಿದೆ. ಈಗಾಗಲೇ ಜಿಲ್ಲೆಯಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಕುಣಿಗಲ್ ನ ಧನಂಜಯ ಅವರ ವಿಚಾರಣೆ ನಡೆಸಲಾಗಿತ್ತು. ಈಗ ಪೆಂಡೆಂಟ್ ನಲ್ಲಿ ಹುಲಿ ಉಗುರು ಧರಿಸಿದ್ದ ವಿಶ್ವಾಸ ಜ್ಯುವಲರಿ ಮಾಲೀಕರ ವಿಚಾರಣೆಯನ್ನು ಅರಣ್ಯ ಅಧಿಕಾರಿಗಳು ನಡೆಸುವರೇ ಎಂಬ ಚರ್ಚೆ ನಡೆದಿದೆ.