ಸಾರಾಂಶ
ಅಂಗನವಾಡಿಯಲ್ಲಿ ಚಾವಣಿ ಬಿದ್ದು ಇಬ್ಬರು ಮಕ್ಕಳಿಗೆ ಗಾಯ ಸರಗೂರು
ಕನ್ನಡಪ್ರಭ ವಾರ್ತೆ ಸರಗೂರು
ತೆಲುಗುಮಸಹಳ್ಳಿ ಗ್ರಾಮದ ಅಂಗನವಾಡಿಯಲ್ಲಿನ ಮೇಲ್ಛಾವಣಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.ಅವರಿಗೆ ಸರಗೂರಿನ ವಿವೇಕಾನಂದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಕ್ಕಳಿಗೆ ಯಾವುದೇ ಹೆಚ್ಚಿನ ತೊಂದರೆ ಕಂಡುಬಂದಿಲ್ಲ, ಕೆಲ ದಿನಗಳಿಂದ ಭಾರಿ ಮಳೆಯಿಂದ ಕಟ್ಟಡದ ಮೇಲೆ ನಿಂತ ನೀರು ಹೊರಗಡೆ ಹೋಗದೆ ಶೀಥಿಲಗೊಂಡಿದ್ದರಿಂದ ಮೇಲ್ಛಾವಣಿ ಕಿತ್ತು ಬಂದಿದೆ ಎನ್ನಲಾಗಿದೆ,ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಆಶಾ ಭೇಟಿ ನೀಡಿ, ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ಮಕ್ಕಳ ಹಿತದೃಷ್ಟಿಯಿಂದ ಮುಂದೆ ಇಂತಹ ಅನಾಹುತ ನಡೆಯದ ಹಾಗೆ ಸೂಕ್ತ ಕ್ರಮ ವಹಿಸಬೇಕು, ಹಾಗೆ ಶಿಥಿಲಗೊಂಡ ಅಂಗವಾಡಿ ಕಟ್ಟಡವನ್ನು ದುರಸ್ತಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ತೆಲಗುಮಸಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.