ಅನಾಮಧೇಯ ಬಾಕ್ಸ್ ಪತ್ತೆ: ವಿಚಾರಣೆ

| Published : Nov 06 2023, 12:45 AM IST

ಸಾರಾಂಶ

ತಿಪಟೂರಿನ ರೈಲ್ವೆ ನಿಲ್ದಾಣಲ್ಲಿ ಅನಾಮಧೇಯ ಬಾಕ್ಸ್ ಪತ್ತೆಯಾಗಿದ್ದು ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ತಿಪಟೂರಿನ ರೈಲ್ವೆ ನಿಲ್ದಾಣಲ್ಲಿ ಅನಾಮಧೇಯ ಬಾಕ್ಸ್ ಪತ್ತೆಯಾಗಿದ್ದು ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಭದ್ರಾವತಿ ಮೂಲದ ನಸ್ರುಲ್ಲಾ ಮತ್ತು ತಿಪಟೂರಿನ ಗಾಂಧಿನಗರದ ಜಬ್ಬಿ ಎಂಬುವರನ್ನು ವಿಚಾರಣೆ ನಡೆಸಲಾಗಿದೆ. ಹಲವು ದಿವಸಗಳ ಹಿಂದೆ ನಸ್ರುಲ್ಲಾ ತಿಪಟೂರಿಗೆ ಬಂದಿದ್ದ ಎನ್ನಲಾಗಿದೆ. ಶನಿವಾರ ಜಬ್ಬಿ ಕೂಡ ನಸ್ರುಲ್ಲಾ ಜೊತೆ ಕಾರ್ ನಲ್ಲಿ ಶಿವಮೊಗ್ಗಕ್ಕೆ ತೆರಳಿದ್ದರು. ಸದ್ಯ ತಿಪಟೂರಿನ ನಿಗೂಢ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.