ಸಾರಾಂಶ
ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಾಟರ್ ಮನ್ ಆಗಿರುವ ಸುಬ್ಬಯ್ಯ ಬಾಳೆಹೊನ್ನಿಗ ಗ್ರಾಮದಲ್ಲಿ ನೀರಿನ ಟ್ಯಾಂಕ್ ಬಳಿ ಮೋಟಾರ್ ಸ್ಟಾರ್ಟ್ ಮಾಡಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಲಗೂರು : ನೀರಿನ ಟ್ಯಾಂಕ್ ಬಳಿ ಕಾಲುಜಾರಿ ಬಿದ್ದು ವಾಟರ್ ಮನ್ ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಳೆಹೊನ್ನಿಗ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾದಯ್ಯರ ಪುತ್ರ ಸುಬ್ಬಯ್ಯ (48) ಮೃತಪಟ್ಟವರು.
ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಾಟರ್ ಮನ್ ಆಗಿರುವ ಸುಬ್ಬಯ್ಯ ಬಾಳೆಹೊನ್ನಿಗ ಗ್ರಾಮದಲ್ಲಿ ನೀರಿನ ಟ್ಯಾಂಕ್ ಬಳಿ ಮೋಟಾರ್ ಸ್ಟಾರ್ಟ್ ಮಾಡಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 123.10 ಅಡಿ
ಒಳ ಹರಿವು – 19,040 ಕ್ಯುಸೆಕ್
ಹೊರ ಹರಿವು – 18,676 ಕ್ಯುಸೆಕ್
ನೀರಿನ ಸಂಗ್ರಹ – 47.106 ಟಿಎಂಸಿ