ಸಾರಾಂಶ
ಶ್ರೀರಂಗಪಟ್ಟಣ: ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಈಕೆಯ ಪ್ರಿಯಕರನಿಗೆ ಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಮೇಳಾಪುರ ಗ್ರಾಮದ ಲತಾ ಹಾಗೂ ಈಕೆಯ ಪ್ರಿಯಕರ ಸಂತೋಷ್ ಶಿಕ್ಷೆಗೆ ಗುರಿಯಾದವರು.ಕಳೆದ 2015ರ ಫೆ. 15ರಂದು ಮೇಳಾಪುರ ಗ್ರಾಮದ ಚಂದ್ರಶೇಖರ್ ಅವರನ್ನು ಪತ್ನಿ ಲತಾ ತನ್ನ ಪ್ರಿಯಕರ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದ ಸಂತೋಷ್ ಜೊತೆಗೂಡಿ ಕೊಲೆ ಮಾಡಿದ್ದರು.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆದ ನಂತರ ನ್ಯಾಯಾಧೀಶ ಗೋಪಾಲಕಷ್ಣ ರೈ ಅಪರಾಧಿಗಳಿಗೆ ಕಠಿಣ ಶಿಕ್ಷೆ ತೀರ್ಪು ನೀಡಿದ್ದಾರೆ. ವಕೀಲೆ ಪ್ರಪುಲ್ಲಾ ಸರ್ಕಾರಿ ಅಭಿಯೊಜಕರಾಗಿ ಕಾರ್ಯ ನಿರ್ವಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಂಗ್ರಹಿಸಿ ಉತ್ತಮ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪಣ ಪತ್ರ ಸಲ್ಲಿಸಿದ್ದ ಅಂದಿನ ತನಿಖಾಧಿಕಾರಿ ಎಂ.ಕೆ.ದೀಪಕ್, ಸಿಹೆಚ್ ಸಿ ಸುದರ್ಶನ್, ತನಿಖಾ ಸಹಾಯಕರಾದ ಬಿ.ಸಿ.ಕೃಷ್ಣ, ಲೋಕೇಶ್ ಅಪರಾಧಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಕೆ. ಶ್ರೀನಿವಾಸಮೂರ್ತಿ ಈ ಪ್ರಕರಣದ ಕೋರ್ಟ್ ಮಾನಿಟರಿಂಗ್ ಪೊಲೀಸ್ ಅಧಿಕಾರಿ ಬಿ.ಜಿ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ರಘುಕುಮಾರ್, ಹರೀಶ ಹಾಗೂ ರಘುವೀರ ಅವರ ಕಾರ್ಯವನ್ನು ಜಿಲ್ಲಾ ಎಸ್ಪಿ ಶ್ಲಾಘಿಸಿದ್ದಾರೆ.
)
)
;Resize=(128,128))
;Resize=(128,128))