ಬಸ್ಸಲ್ಲಿ ಕಿಟಕಿಯ ವಿಚಾರಕ್ಕೆ ಶೂ,ಚಪ್ಪಲಿಯಲ್ಲಿ ಮಹಿಳೆಯರ ಫೈಟ್‌

| Published : Feb 09 2024, 01:46 AM IST / Updated: Feb 09 2024, 09:00 AM IST

BMTC BUS Fight | Kannada Prabha
ಬಸ್ಸಲ್ಲಿ ಕಿಟಕಿಯ ವಿಚಾರಕ್ಕೆ ಶೂ,ಚಪ್ಪಲಿಯಲ್ಲಿ ಮಹಿಳೆಯರ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಿಟಕಿ ತೆರೆಯುವ ವಿಚಾರಕ್ಕೆ ಇಬ್ಬರು ಮಹಿಳೆಯರು ಬಿಎಂಟಿಸಿ ಬಸ್‌ನಲ್ಲಿಯೇ ಚಪ್ಪಲಿ, ಸ್ಲಿಪ್ಪರ್‌ನಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬಿಎಂಟಿಸಿ ಬಸ್‌ ಪ್ರಯಾಣದ ವೇಳೆ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳವಾಗಿ ಪರಸ್ಪರ ಶೂ-ಚಪ್ಪಲಿಗಳಲ್ಲಿ ಹೊಡೆದಾಡಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಮೆಜೆಸ್ಟಿಕ್‌-ಪೀಣ್ಯ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಬಸ್‌ನ ಕಿಟಕಿ ತೆಗೆಯುವ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದಿದೆ. 

ಈ ವೇಳೆ ಕೋಪೋದ್ರಿಕ್ತಳಾದ ಮಹಿಳೆ ಏಕಾಏಕಿ ತನ್ನ ಶೂ ಕಳಚಿ ಮತ್ತೊಬ್ಬ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಮಹಿಳೆ ತನ್ನ ಚಪ್ಪಲಿ ಕಳಚಿ ಶೂನಲ್ಲಿ ಹಲ್ಲೆ ಮಾಡಿದ ಮಹಿಳೆಗೆ ಹೊಡೆದಿದ್ದಾರೆ. 

ಹೀಗೆ ಇಬ್ಬರು ಮಹಿಳೆಯರು ಕೆಲ ಕಾಲ ಪರಸ್ಪರ ಶೂ-ಚಪ್ಪಲಿಯಲ್ಲಿ ಬಡಿದಾಡಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ಹಾಗೂ ಬಸ್‌ನ ನಿರ್ವಾಹಕರು ಮಧ್ಯ ಪ್ರವೇಶಿಸಿ ಇಬ್ಬರು ಮಹಿಳೆಯರಿಗೂ ತಿಳಿ ಹೇಳಿ ಸಮಾಧಾನಪಡಿಸಿದ್ದಾರೆ.

ಈ ಚಪ್ಪಲಿ ಕಾಳಗದ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಆ ವಿಡಿಯೋ ವೈರಲ್‌ ಆಗಿದೆ.