ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ: ರಮ್ಯಾ

| Published : Mar 27 2024, 01:02 AM IST / Updated: Mar 27 2024, 01:03 AM IST

ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ: ರಮ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ರಮ್ಯಾ ಉತ್ತರಕಾಂಡ ಸಿನಿಮಾದಿಂದ ಹೊರಬಂದಿದ್ದಾರೆ. ಇದಕ್ಕೆ ಡೇಟ್ಸ್ ಸಮಸ್ಯೆ ಕಾರಣ ಎಂದು ನಟಿ ತಿಳಿಸಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ಡಾಲಿ ಧನಂಜಯ ನಟನೆಯ, ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಚಿತ್ರದಲ್ಲಿ ರಮ್ಯಾ ನಟಿಸುತ್ತಿಲ್ಲ. ಕೆಆರ್‌ಜಿ ಸ್ಟುಡಿಯೋಸ್‌ ನಿರ್ಮಾಣದ ಈ ಸಿನಿಮಾದಿಂದ ಹೊರಹೋಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘ಡೇಟ್ಸ್‌ ಸಮಸ್ಯೆಯಿಂದಾಗಿ ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ರಾಜಕೀಯ ಮತ್ತು ಸಿನಿಮಾ ಕೆಲಸಗಳನ್ನು ಸದ್ಯ ಸ್ಥಗಿತಗೊಳಿಸಿದ್ದೇನೆ. ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಹೇಳಿದ್ದಾರೆ. ಈ ಪ್ರಕ್ರಿಯೆಗಳಿಂದ ರಮ್ಯಾ ಅವರು ನಟನೆಗೆ ಕಾಲಿಡುವುದು ಮತ್ತಷ್ಟು ತಡವಾದಂತಾಗಿದೆ.