ಲಂಗೋಟಿ ಮ್ಯಾನ್‌ ಟೀಸರ್‌ಗೆ ಜನ ಮೆಚ್ಚುಗೆ

| Published : Aug 28 2024, 12:47 AM IST

ಸಾರಾಂಶ

ನಾನು ಕ್ಯಾಮರಾ ಮುಂದೆ ಫುಲ್ ಬೆತ್ತಲಾಗಿ ಓಡು ಅಂದರೆ ಅದಕ್ಕೂ ರೆಡಿ. ಈ ಸಿನಿಮಾದಲ್ಲಿ ನನಗೆ ಲಂಗೋಟಿ ಕಟ್ಕೊಂಡು ಅಂಡರ್‌ವೇರ್‌ಗಾಗಿ ಓಡೋ ಪಾತ್ರ ಅಂತಾರೆ ಲಂಗೋಟಿ ಮ್ಯಾನ್ ಹೀರೋ ಆಕಾಶ್

ಕನ್ನಡಪ್ರಭ ಸಿನಿವಾರ್ತೆ

ಆಕಾಶ್‌ ರ್‍ಯಾಂಬೋ ನಟನೆಯ ‘ಲಂಗೋಟಿ ಮ್ಯಾನ್‌’ ಸಿನಿಮಾ ಟೀಸರ್‌ ಏ2 ಫಿಲಂಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಐದೂವರೆ ಲಕ್ಷದಷ್ಟು ಜನ ಈ ಟೀಸರ್‌ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ಆಕಾಶ್‌ ರ್‍ಯಾಂಬೋ, ‘ನಿರ್ದೇಶಕರು ಹಿಂಜರಿಕೆಯಲ್ಲೇ, ಬರೀ ಲಂಗೋಟಿ ಹಾಕ್ಕೊಂಡು ಆ್ಯಕ್ಟ್‌ ಮಾಡಬೇಕಾಗುತ್ತೆ ಅಂದರು. ನಾನು ಕ್ಯಾಮರಾ ಮುಂದೆ ಫುಲ್ ಬೆತ್ತಲಾಗಿ ಓಡು ಅಂದರೆ ಅದಕ್ಕೂ ರೆಡಿ ಅಂದೆ. ಈ ಸಿನಿಮಾದಲ್ಲಿ ನನಗೆ ಲಂಗೋಟಿ ಕಟ್ಕೊಂಡು ಅಂಡರ್‌ವೇರ್‌ಗಾಗಿ ಓಡೋ ಪಾತ್ರ’ ಎಂದರು.

ನಿರ್ದೇಶಕಿ ಸಂಜೋತಾ ಭಂಡಾರಿ ಮೂಲತಃ ಸಾಫ್ಟ್‌ವೇರ್ ಹಿನ್ನೆಲೆಯವರು. ಅವರು, ‘ನಾನು ಈ ಕಥೆಯ ಹಿಂದೆ ಹೋದದ್ದಲ್ಲ. ಕಥೆಯೇ ಸಿನಿಮಾವಾಗಲು ನನ್ನನ್ನು ಬಳಸಿಕೊಂಡಿತು. ಈ ಸಿನಿಮಾ ಸೂಪರ್‌ ಹಿಟ್‌ ಆಗಿ, ಅವಾರ್ಡೂ ಪಡೆಯುತ್ತದೆ ಎಂಬ ನಂಬಿಕೆ ನನ್ನದು’ ಎಂದರು. ನಟ ಶರಣ್‌ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು.

ನಾಯಕಿ ಸಂಹಿತಾ ವಿನ್ಯಾ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಕಲಾವಿದರಾದ ಹುಲಿ ಕಾರ್ತಿಕ್‌, ವೀರೇಂದ್ರ, ಸಾಯಿ ಪಾಲ್ಗುಣ್, ಪಲ್ಟಿ ಗೋವಿಂದ ಸುದ್ದಿಗೋಷ್ಠಿಯಲ್ಲಿದ್ದರು.