ಸಾರಾಂಶ
ಹಾರರ್ ಮತ್ತು ರಿವೇಂಜ್ ಕತೆಯನ್ನು ಹೊಂದಿರುವ ‘ಆತ್ಮ ತಲ್ಲಣ’ ಚಿತ್ರ ಡಿ.29ಕ್ಕೆ ಬಿಡುಗಡೆ ಆಗುತ್ತಿದೆ. ಹೊಸಬರ ಸಿನಿಮಾ ಆಗಿರುವ ಕಾರಣ ಮೊದಲಿಗೆ ಹತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ಹಾರರ್ ಮತ್ತು ರಿವೇಂಜ್ ಕತೆಯನ್ನು ಹೊಂದಿರುವ ‘ಆತ್ಮ ತಲ್ಲಣ’ ಚಿತ್ರ ಡಿ.29ಕ್ಕೆ ಬಿಡುಗಡೆ ಆಗುತ್ತಿದೆ. ಹೊಸಬರ ಸಿನಿಮಾ ಆಗಿರುವ ಕಾರಣ ಮೊದಲಿಗೆ ಹತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.ಆದಿ ಕೇಶವರೆಡ್ಡಿ ಈ ಚಿತ್ರದ ನಾಯಕ. ಇವರೇ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಸಿನಿಮಾ ಬಿಡುಗಡೆ ಹಂತದಲ್ಲಿರುವಾಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಳ್ಳುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ. ಎಸ್ ಪಿ ಕೃಷ್ಣ ನಿರ್ದೇಶನ, ನಿರ್ಮಾಣದ ಈ ಚಿತ್ರದಲ್ಲಿ ನಾಯಕಿಯಾಗಿ ಲಾವಣ್ಯ ಅಭಿನಯಿಸಿದ್ದಾರೆ. ನೈಜ ಘಟನೆಗಳನ್ನು ಒಳಗೊಂಡ ಕತೆ ಇದು. ಮುನಿ, ರೋಹಿತ್, ಗೌರಿ ನಟಿಸಿದ್ದಾರೆ. ಶ್ರೀನಿ ಕೊಪ್ಪ ಸಂಗೀತ, ದಾಶಿವ ಕ್ಯಾಮೆರಾ ಚಿತ್ರಕ್ಕಿದೆ.