ಸಾರಾಂಶ
ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಸುಕುಮಾರ್ ಈಗ ಹೀರೋ ಆಗುತ್ತಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಡಿಟೆಕ್ಟಿವ್ ಗಜವದನ’ ಚಿತ್ರಕ್ಕೆ ಮುಹೂರ್ತ ಆಗಿದೆ. ಜೆ ಜೆ ಶ್ರೀನಿವಾಸ್ ನಿರ್ಮಾಣ, ನಿರ್ದೇಶನದ ಚಿತ್ರವಿದು.
ಕನ್ನಡಪ್ರಭ ಸಿನಿವಾರ್ತೆ
ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಸುಕುಮಾರ್ ಈಗ ಹೀರೋ ಆಗುತ್ತಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಡಿಟೆಕ್ಟಿವ್ ಗಜವದನ’ ಚಿತ್ರಕ್ಕೆ ಮುಹೂರ್ತ ಆಗಿದೆ. ಜೆ ಜೆ ಶ್ರೀನಿವಾಸ್ ನಿರ್ಮಾಣ, ನಿರ್ದೇಶನದ ಚಿತ್ರವಿದು.ನಿರ್ದೇಶಕ ಶ್ರೀನಿವಾಸ್, ‘ತನ್ನ ಕುಟುಂಬಕ್ಕೆ ಏನಾದರೂ ಸಮಸ್ಯೆ ಬಂದಾಗ ನಾಯಕ ಹೇಗೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕತೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ನೆರಳಿನಲ್ಲಿ ಇಡೀ ಸಿನಿಮಾ ಸಾಗುತ್ತದೆ’ ಎಂದರು. ಬಸುಕುಮಾರ್ ಮಾತನಾಡಿ, ‘ಈ ಚಿತ್ರಕ್ಕೆ ಕತೆ, ನಿರ್ದೇಶಕ ಹಾಗೂ ಚಿತ್ರದ ನಾಯಕಿ ಚಂದನಾ ಅವರೇ ಹೀರೋ. ನಾನು ನೆಪ ಮಾತ್ರ. ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ ಮಾಡಲಿದ್ದೇವೆ’ ಎಂದರು. ನಾಯಕ ನಟಿ ಚಂದನಾ ರಾಘವೇಂದ್ರ, ‘ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ತುಂಬಾ ಮಹತ್ವ ಇದೆ’ ಎಂದು ಹೇಳಿದರು. ನಿರ್ಮಾಪಕರಾದ ನಾಗೇಶ್ ಕುಮಾರ್ ಹಾಗೂ ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಎಂ ಎಸ್ ಉಮೇಶ್, ವಿಜಯ್ ಚೆಂಡೂರ್, ದಿನೇಶ್ ಮಂಗಳೂರು, ವಿಕ್ರಮ್, ಬಲ ರಾಜವಾಡಿ ತಾರಾಬಳಗದಲ್ಲಿದ್ದಾರೆ. ಎ ಟಿ ಸಂಗೀತ ನಿರ್ದೇಶನ, ಶ್ಯಾಮ್ ಛಾಯಾಗ್ರಹಣ ಚಿತ್ರಕ್ಕಿದೆ.