ಕನ್ನಡ ಸಿನಿಮಾದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಎಂ ಎಂ ಕೀರವಾಣಿ ಗಾಯನ

ಕನ್ನಡಪ್ರಭ ಸಿನಿವಾರ್ತೆ

ರಾಜ್ ಕುಮಾರ್ ಅಸ್ಕಿ ನಿರ್ದೇಶನದ ‘ರಂಗ ಸಮುದ್ರ’ ಸಿನಿಮಾದ ಹಾಡೊಂದಕ್ಕೆ ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ದನಿಯಾಗಿದ್ದಾರೆ. ‘ಹತ್ತೂರಿನ ದೀಪ’ ಎಂಬ ತಾವು ಹಾಡಿದ ಹಾಡನ್ನೂ ಅವರೇ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಜಂಕಾರ್ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಹಾಡು ಕೇಳಬಹುದು. ದೇಸಿ ಮೋಹನ್‌ ಸಂಗೀತ ನಿರ್ದೇಶನದ ಹಾಡಿಗೆ ವಾಗೀಶ್ ಚನ್ನಗಿರಿ ಸಾಹಿತ್ಯವಿದೆ.

ಹೊಯ್ಸಳ ಕೊಣನೂರು ನಿರ್ಮಾಣದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜುನಟಿಸಿದ್ದಾರೆ. ಈ ಸಿನಿಮಾ ಜನವರಿ 12ಕ್ಕೆ ತೆರೆಗೆ ಬರಲಿದೆ.