ಅಡ್ವಾನ್ಸ್‌ ಬುಕಿಂಗ್‌ನಲ್ಲೇ 1 ಕೋಟಿ ಬಾಚಿದ ಕಾಟೇರ

| Published : Dec 27 2023, 01:30 AM IST

ಅಡ್ವಾನ್ಸ್‌ ಬುಕಿಂಗ್‌ನಲ್ಲೇ 1 ಕೋಟಿ ಬಾಚಿದ ಕಾಟೇರ
Share this Article
  • FB
  • TW
  • Linkdin
  • Email

ಸಾರಾಂಶ

ರಿಲೀಸ್‌ಗೂ ಮೊದಲೇ ಕೋಟಿ ಬಾಚಿದ ಚಾಲೆಂಜಿಂಗ್ ಸ್ಟಾರ್ ಸಿನಿಮಾ ಕಾಟೇರ

ಕನ್ನಡಪ್ರಭ ಸಿನಿವಾರ್ತೆ

ಡಿ.29ಕ್ಕೆ ಬಿಡುಗಡೆ ಆಗುತ್ತಿರುವ ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸತೊಂದು ದಾಖಲೆ ಮಾಡಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಅಡ್ವಾನ್ಸ್‌ ಬುಕಿಂಗ್‌ನಲ್ಲೇ 1 ಕೋಟಿ ರು. ಕಲೆಕ್ಷನ್ ಮಾಡಿದೆ. ಕನ್ನಡ ಭಾಷೆಯೊಂದರಲ್ಲೇ ಬಿಡುಗಡೆಯಾದ ನಾನ್‌ ಪಾನ್‌ ಇಂಡಿಯಾ ಚಿತ್ರವೊಂದು ಈ ರೀತಿ ಗಳಿಕೆ ಮಾಡಿರುವುದು ಇದೇ ಮೊದಲು. ಕರ್ನಾಟಕದಾದ್ಯಂತ ಈವರೆಗೆ 50,000ಕ್ಕೂ ಅಧಿಕ ಟಿಕೆಟ್‌ಗಳ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ. ಸಿನಿಮಾ ಬಿಡುಗಡೆಗೂ ಕೆಲವು ದಿನ ಮೊದಲೇ ಹಲವು ಥಿಯೇಟರ್‌ಗಳಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ.