ಸಾರಾಂಶ
ನೆನಪಿರಲಿ ಪ್ರೇಮ್ ಹಾಗೂ ಜಾಕಿ ಭಾವನಾ ಅವರು ‘ಪಿಂಕ್ ನೋಟ್’ ಚಿತ್ರಕ್ಕೆ ಜೋಡಿಯಾಗಿದ್ದಾರೆ. ಡಿ.9ರಿಂದ ದುಬೈನಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭವಾಗಿದೆ.
ಕನ್ನಡಪ್ರಭ ಸಿನಿವಾರ್ತೆ
ನೆನಪಿರಲಿ ಪ್ರೇಮ್ ಹಾಗೂ ಜಾಕಿ ಭಾವನಾ ಅವರು ‘ಪಿಂಕ್ ನೋಟ್’ ಚಿತ್ರಕ್ಕೆ ಜೋಡಿಯಾಗಿದ್ದಾರೆ. ಡಿ.9ರಿಂದ ದುಬೈನಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭವಾಗಿದೆ. ರುಕ್ಷಣ್ (ರುದ್ರೇಶ್) ಕತೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸೆಲ್ವಂ ಮಾದಪ್ಪನ್ ಕ್ಯಾಮೆರಾ, ಜೆಸ್ಸಿಗಿಫ್ಟ್ ಸಂಗೀತ ಇದೆ. ಶ್ರೀನಿವಾಸ ಪ್ರಭು, ಪದ್ಮಜಾ ರಾವ್, ಗಿರೀಶ್, ಶಿವಣ್ಣ, ಮುನಿ, ಯುಗ ಚಂದ್ರು, ಸಿಂಚನಾ, ಶೈಲಜಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.