ನಟ ಸುದೀಪ್ ಅವರ ನಿರೂಪಣೆಯಲ್ಲಿ 13ನೇ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ಸೆ.6ರಿಂದ ಆರಂಭವಾಗಲಿದೆ. ಸೆ.6 ರಂದು ಸಂಜೆ 7ಕ್ಕೆ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಶೋ ಪ್ರಸಾರ ಆಗಲಿದೆ.
ಬೆಂಗಳೂರು : ನಟ ಸುದೀಪ್ ಅವರ ನಿರೂಪಣೆಯಲ್ಲಿ 13ನೇ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ ಸೆ.6ರಿಂದ ಆರಂಭವಾಗಲಿದೆ. ಸೆ.6 ರಂದು ಸಂಜೆ 7ಕ್ಕೆ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಶೋ ಪ್ರಸಾರ ಆಗಲಿದೆ.
ಎಂದಿನಂತೆ 100 ದಿನ ಶೋ ನಡೆಯಲಿದೆ
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಸುದೀಪ್ ಅವರು, ‘ಎಂದಿನಂತೆ 100 ದಿನ ಶೋ ನಡೆಯಲಿದೆ. ಎಷ್ಟು ಮಂದಿ ಸ್ಪರ್ಧಿಗಳು ಎಂಬುದು ಸೆ.6ಕ್ಕೆ ಗೊತ್ತಾಗಲಿದೆ. ಈ ಬಾರಿ ಫ್ಲೈಟ್ ಥೀಮ್‌ನಲ್ಲಿ ಶೋ ಡಿಸೈನ್ ಮಾಡಲಾಗಿದೆ. ಬಿಗ್‌ಬಾಸ್ ಅಗ್ನಿ ಪರೀಕ್ಷೆ ಕಾರ್ಯಕ್ರಮದಿಂದ 3 ಮಂದಿ ಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದವರು ಸೆಲೆಬ್ರಿಟಿಗಳಾಗಿರುತ್ತಾರೆ’ ಎಂದರು.
ಚಿತ್ರರಂಗದ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ
ಇದೇ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ‘ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಅಭಿನಯದ ಹಾಡುಗಳನ್ನು ಹಾಕದೆ ಇರುವುದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಕೆಲವೊಮ್ಮೆ ಯಾಕೆ ಈ ಹಾಡುಗಳನ್ನು ಪ್ಲೇ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುವವರೂ ಇರುತ್ತಾರೆ, ಕೆಲವೊಮ್ಮೆ ಬೆದರಿಕೆಗಳು ಸಹ ಇರಬಹುದು. ಆದರೆ, ನಮಗೆ ಚಿತ್ರರಂಗದ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ. ಯಾರ ಮೇಲೂ ದ್ವೇಷವಿಲ್ಲ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಪ್ರಕಾಶ್ ಸೇರಿ ಪ್ರಮುಖರು ಹಾಜರಿದ್ದರು.

