ಸಾರಾಂಶ
ಸುದೀಪ್ ನಟನೆ, ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಭಾಷ ಸಿನಿಮಾ ಕೆಲಸಕ್ಕೆ ಚಾಲನೆ.
ಈ ವರ್ಷವೇ ತನ್ನ ನಟನೆಯ ‘ಬಿಲ್ಲಾ ರಂಗಾ ಭಾಷಾ’ ಸಿನಿಮಾದ ಕೆಲಸಗಳು ಶುರುವಾಗಲಿವೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇತ್ತೀಚೆಗೆ ‘ಆಸ್ಕ್ ವಿತ್ ಕಿಚ್ಚ’ ಹ್ಯಾಶ್‌ಟ್ಯಾಗ್‌ನಡಿ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಸುದೀಪ್ ಈ ವಿಷಯ ತಿಳಿಸಿದ್ದಾರೆ.
ನಿರ್ದೇಶಕ ಅನೂಪ್ ಭಂಡಾರಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ ಈ ಬಗ್ಗೆ ಈಗಲೇ ಏನೂ ಹೇಳಲಾಗದು. ಇನ್ನೊಂದು ತಿಂಗಳಲ್ಲಿ ಸುದೀಪ್ ಜೊತೆಗೆ ಚರ್ಚಿಸಿ ಅಪ್‌ಡೇಟ್ ನೀಡುತ್ತೇನೆ. ಚಿ
ತ್ರದ ಕೆಲಸಗಳಂತೂ ನಡೆಯುತ್ತಿವೆ’ ಎಂದಿದ್ದಾರೆ. ಐದು ವರ್ಷಗಳ ಹಿಂದೆಯೇ ಸುದೀಪ್ ನಟನೆಯ ‘ಬಿಲ್ಲಾ ರಂಗಾ ಭಾಷಾ’ ಸಿನಿಮಾ ಘೋಷಣೆಯಾಗಿತ್ತು.