ಅಮೆಜಾನ್‌ ಪ್ರೈಮ್‌ನಲ್ಲಿ ಕೇಸ್ ಆಫ್ ಕೊಂಡಾಣ

| Published : Apr 02 2024, 01:01 AM IST / Updated: Apr 02 2024, 06:58 AM IST

ಅಮೆಜಾನ್‌ ಪ್ರೈಮ್‌ನಲ್ಲಿ ಕೇಸ್ ಆಫ್ ಕೊಂಡಾಣ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆಜಾನ್ ಪ್ರೈಮ್ ನಲ್ಲಿ ವಿಜಯ ರಾಘವೇಂದ್ರ ನಟನೆಯ ಕೇಸ್ ಆಪ್ ಕೊಂಡಾಣ ಸಿನಿಮಾ ಪ್ರಸಾರ.

  ಸಿನಿವಾರ್ತೆ : ಬಹು ಮೆಚ್ಚುಗೆ ಗಳಿಸಿದ್ದ ವಿಜಯ್ ರಾಘವೇಂದ್ರ ನಟನೆಯ ‘ಕೇಸ್ ಆಫ್ ಕೊಂಡಾಣ’ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿದೆ.

‘ಸೀತಾರಾಮ್ ಬಿನೋಯ್’ ಖ್ಯಾತಿಯ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ನಿರ್ದೇಶನದ ಸಿನಿಮಾ ಇದು. ವಿಶಿಷ್ಟ ರೀತಿಯ ಕತೆ ಹೆಣೆಯುವ ಈ ನಿರ್ದೇಶಕರ ಎರಡನೇ ಸಿನಿಮಾ ‘ಕೇಸ್ ಆಫ್ ಕೊಂಡಾಣ’ ವಿಭಿನ್ನ ಕತೆಯಿಂದಾಗಿ ಗಮನ ಸೆಳೆದಿತ್ತು. ಭಾವನಾ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಸಿನಿಮಾ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಿದೆ. ಈ ತಂಡದ ‘ಸೀತಾರಾಮ್ ಬಿನೋಯ್’ ಸಿನಿಮಾ ಪ್ರೈಮ್‌ನಲ್ಲಿ ಭಾರಿ ಮೆಚ್ಚುಗೆ ಗಳಿಸಿತ್ತು ಮತ್ತು ಅತಿ ವೀಕ್ಷಣೆ ಕಂಡಿತ್ತು. ಇದೀಗ ಎರಡನೇ ಸಿನಿಮಾ ಕೂಡ ಅಲ್ಲಿಯೇ ಬಿಡುಗಡೆ ಆಗಿದೆ.