ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ವಿಶಿಷ್ಟ ಪಾತ್ರ: ಚಂದನ್‌ ಶೆಟ್ಟಿ

| Published : Mar 27 2024, 01:07 AM IST

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ವಿಶಿಷ್ಟ ಪಾತ್ರ: ಚಂದನ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿರುವುದಾಗಿ ಚಂದನ್‌ ಶೆಟ್ಟಿ ತಿಳಿಸಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ ನನ್ನ ಮೂರನೇ ಸಿನಿಮಾ. ಇದರಲ್ಲಿನ ನನ್ನ ಪಾತ್ರಕ್ಕೂ, ನನ್ನ ನಿಜ ವ್ಯಕ್ತಿತ್ವಕ್ಕೂ ಅಜಗಜಾಂತರ’ ಎಂದು ರ್‍ಯಾಪರ್ ಚಂದನ್‌ ಶೆಟ್ಟಿ ಹೇಳಿದ್ದಾರೆ. ಇವರು ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಅರುಣ್‌ ಅಮುಕ್ತ, ‘ಚಂದನ್‌ ಶೆಟ್ಟಿ ನಮ್ಮ ಸಿನಿಮಾದಲ್ಲಿ ನಟಿಸುತ್ತಾರೆ ಎಂದಾಗ ನಮ್ಮ ತಂಡದವರೇ ಅವರಿಗೆ ನಟನೆ ಗೊತ್ತಿದೆಯಾ ಎಂದು ಪ್ರಶ್ನೆ ಮಾಡಿದ್ದರು. ಆದರೆ ಚಂದನ್‌ ಅವರೆಲ್ಲರಿಗೂ ಅಚ್ಚರಿಯಾಗುವ ರೀತಿ ನಟಿಸಿದ್ದಾರೆ. ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದರು. ಅಮರ್‌, ಭಾವನಾ ಅಪ್ಪು, ಮನೋಜ್‌ ವಿವಾನ್‌, ಮನಸ್ವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಮರ್‌, ‘ಮೊದಲ ಸಿನಿಮಾ ಹೃದಯಕ್ಕೆ ಹತ್ತಿರ’ ಎಂದರೆ, ಭಾವನಾ, ‘ಈ ಸಿನಿಮಾದಲ್ಲಿ ಶೇ.90ರಷ್ಟು ಪ್ರಾಮುಖ್ಯತೆ ತನ್ನ ಪಾತ್ರಕ್ಕಿದೆ’ ಎಂದರು.ಹಿರಿಯ ಕಲಾವಿದರಾದ ಭವ್ಯಾ, ಸುನೀಲ್‌ ಪುರಾಣಿಕ್‌, ರಾಘು ರಾಮನಕೊಪ್ಪ, ಪ್ರಶಾಂತ್‌ ಸಂಬರ್ಗಿ ಸುದ್ದಿಗೋಷ್ಠಿಯಲ್ಲಿದ್ದರು. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.