ಹಳೆಯ ಪ್ರೇಮದ ನೆರಳು

| Published : Mar 23 2024, 01:05 AM IST

ಸಾರಾಂಶ

ಹೊಸಬರೇ ಸೇರಿ ಮಾಡಿರುವ ದಿಲ್ ಖುಷ್ ಈ ವಾರ ತೆರೆಗೆ ಬಂದಿದೆ. ಹಳೆಯ ಪ್ರೇಮ ಕತೆಯನ್ನು ಒಳಗೊಂಡ ಈ ಸಿನಿಮಾ ಹೇಗಿದೆ?

ಚಿತ್ರ: ದಿಲ್‌ ಖುಷ್‌

ತಾರಾಗಣ: ರಂಜಿತ್, ಸ್ಪಂದನ ಸೋಮಣ್ಣ, ಧರ್ಮಣ್ಣ ಕಡೂರು, ರಂಗಾಯಣ ರಘು, ಅರುಣಾ ಬಾಲರಾಜ್‌, ಕೃಷ್ಣ ಭಟ್‌ನಿರ್ದೇಶನ: ಪ್ರಮೋದ್ ಜಯ

ರೇಟಿಂಗ್‌: 3

ಆರ್‌.ಕೆಬಾಲ್ಯದ ಪ್ರೇಮವೊಂದು ಯೌವ್ವನದ ಕಾಲದಲ್ಲಿ ಚಿಗುರೊಡೆದ ಪ್ರೀತಿಗೆ ಅಡ್ಡಿ ಆದರೆ ಏನಾಗುತ್ತದೆ ಎಂಬುದು ‘ದಿಲ್‌ ಖುಷ್‌’ ಚಿತ್ರದ ಒಂದು ಸಾಲಿನ ಕತೆ. ಬಾಲ್ಯದ ಪ್ರೇಮ ಮತ್ತು ಯೌವ್ವನದ ಲವ್‌ ಸ್ಟೋರಿ ನಡುವೆ ಏನೆಲ್ಲ ಮಡೆಯುತ್ತದೆ ಎಂಬುದನ್ನು ಹೇಳುವ ಸಾಹಸದ ಭಾಗವಾಗಿ ಈ ಚಿತ್ರವನ್ನು ರೂಪಿಸಿದಂತಿದೆ ನಿರ್ದೇಶಕ ಪ್ರಮೋದ್‌ ಜಯ. ಕನ್‌ಸ್ಟ್ರಕ್ಷನ್‌ ಕಂಪನಿಯಲ್ಲಿ ಕೆಲಸ ಮಾಡುವ ನಾಯಕ, ನಾಯಕಿ. ಇಬ್ಬರ ನಡುವೆ ಮೊದಲು ಸ್ನೇಹ. ನಂತರ ಪ್ರೀತಿ. ಇನ್ನೇನು ಪ್ರೀತಿ ಹೇಳಿಕೊಳ್ಳಬೇಕು ಎಂದುಕೊಂಡಾಗ ಮನೆಯಲ್ಲಿ ಒಂದು ಲಗ್ನಪತ್ರಿಕೆ ಬರುತ್ತದೆ. ಮುಂದೆ ಎರಡು ಪ್ರೇಮ ಕತೆಗಳು ಮುಖಾಮುಖಿ ಆಗಿ ನಾಯಕ ಯಾವ ಪ್ರೇಮ ಕತೆಯಲ್ಲಿ ಗೆಲ್ಲುತ್ತಾನೆ ಎಂಬುದು ಚಿತ್ರದ ಕೇಂದ್ರಬಿಂದು. ಬೆಂಗಳೂರು ಮತ್ತು ಮಲೆನಾಡಿನ ಮಳೆಯ ಮೋಡಗಳು ಕತೆಯ ಹಿನ್ನೆಲೆ ಪಿಲ್ಲರ್‌ಗಳಾಗಿ ನಿಂತಿವೆ. ಕತೆ ತೀರಾ ಹೊಸತು ಅನ್ನಿಸುವುದಿಲ್ಲ. ಆದರೆ, ಒಂದಿಷ್ಟು ಹೊಸ ತಿರುವುಗಳು, ಮುಂದೇನಾಗುತ್ತದೆಂಬ ಕುತೂಹಲದ ಮೇಲೆ ಸಿನಿಮಾ ಸಾಗುತ್ತದೆ. ಈ ನಡುವೆ ಅಲ್ಲಲ್ಲಿ ಕೇಳಿ ಬರುವ ಲವಲವಿಕೆಯ ಸಂಭಾಷಣೆಗಳು, ಧರ್ಮಣ್ಣ ಕಡೂರು ಅವರ ಹಾಸ್ಯದ ಚಟಾಕಿಗಳು ಚಿತ್ರಕ್ಕೆ ಜೀವ ತುಂಬಿವೆ. ಚಿತ್ರದಲ್ಲಿ ಪೋಷಕ ಕಲಾವಿದರ ದೊಡ್ಡ ದಂಡೇ ಇದೆ. ನುರಿತ ಮತ್ತು ಪ್ರಬುದ್ಧ ಕಲಾವಿದರನ್ನು ಮತ್ತಷ್ಟು ಬಳಸಿಕೊಂಡು ಚಿತ್ರದ ಕತೆ ಹಾಗೂ ಪಾತ್ರ ಪೋಷಣೆಯ ತೂಕವನ್ನು ಹೆಚ್ಚಿಸುವ ಅವಕಾಶಗಳು ಇದ್ದವು.