ಸಾರಾಂಶ
ಬಹುಕೋಟಿ ಆ್ಯಕ್ಷನ್ ಡ್ರಾಮಾ ಕೈಗೆತ್ತಿಕೊಂಡಿರುವ ನಿರ್ದೇಶಕ ಹೇಮಂತ್ ರಾವ್
ಪ್ರತಿಭಾವಂತ ನಿರ್ದೇಶಕ ಹೇಮಂತ್ ರಾವ್ ಹೊಸ ಸಿನಿಮಾ ಆರಂಭಿಸಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಎ ಮತ್ತು ಬಿ’ ಸಿನಿಮಾಗಳ ಬಳಿಕ ಅವರು ಆ್ಯಕ್ಷನ್ ಡ್ರಾಮಾ ಸಿನಿಮಾ ಮಾಡುತ್ತಿದ್ದಾರೆ. ಥ್ರಿಲ್ಲರ್ ಸಿನಿಮಾ ಬರವಣಿಗೆಯಲ್ಲಿ ಹಿಡಿತ ಇರುವ ಹೇಮಂತ್ ರಾವ್ ಈ ಬಾರಿ ಐತಿಹಾಸಿಕ ಕತೆಯನ್ನು ಆರಿಸಿಕೊಂಡು ಅದ್ದೂರಿ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ವೈದ್ಯರಾಗಿರುವ ಡಾ.ವೈಶಾಕ್ ಜೆ ಗೌಡ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಈ ಬಗ್ಗೆ ಹೇಮಂತ್ ರಾವ್, ‘ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ. ಬರುವ ವರ್ಷ ಇದೊಂದು ಬಿಗ್ಗೆಸ್ಟ್ ರಿಲೀಸ್ ಆಗಲಿದೆ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ನಿರ್ಮಿಸುತ್ತಿದ್ದೇವೆ. ಆದರೆ ಮುಂದೆ ಸಿನಿಮಾ ಆದಮೇಲೆ ಇದು ಪ್ಯಾನ್ ಇಂಡಿಯಾ ಮಟ್ಟಕ್ಕೂ ಹೋಗಬಹುದು. ವೈದ್ಯರಾಗಿರುವ ವೈಶಾಕ್ ಜೆ ಗೌಡ ಭಾರಿ ಸಿನಿಮಾ ವ್ಯಾಮೋಹಿ. ಅವರು ಈ ಸಿನಿಮಾ ನಿರ್ಮಾಣಕ್ಕೋಸ್ಕರ ಅವರ ವೃತ್ತಿಯನ್ನು ಬಿಟ್ಟು ಬಂದಿದ್ದಾರೆ. ಚಿತ್ರರಂಗದಲ್ಲಿ ಸುದೀರ್ಘ ಕಾಲ ನೆಲೆ ನಿಲ್ಲುವ ಇರಾದೆ ಹೊಂದಿದ್ದಾರೆ’ ಎಂದೂ ಹೇಳಿದ್ದಾರೆ.