ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್‌ 4ಎನ್‌6 ಇಂದು ರಿಲೀಸ್‌

ಮರ್ಡರ್‌ ಮಿಸ್ಟ್ರಿ ಜೊತೆಗೆ ಇನ್‌ವೆಸ್ಟಿಗೇಷನ್ ಥ್ರಿಲ್ಲರ್ ಕಾನ್ಸೆಪ್ಟ್ ಹೊಂದಿರುವ ‘4 ಎನ್ 6’ ಸಿನಿಮಾ ಇಂದು ತೆರೆಗೆ ಬರುತ್ತಿದೆ.

 ಕೊಲೆಯೊಂದರ ತನಿಖೆಯ ಜಾಡಿನಲ್ಲಿ ಸಾಗುವ ಚಿತ್ರದಲ್ಲಿ ಫೋರೆನ್ಸಿಕ್ ರಿಪೋರ್ಟ್ ಬಹುಮುಖ್ಯ ಪಾತ್ರ ವಹಿಸುತ್ತದೆ. ರಚನಾ ಇಂದರ್ ಫೋರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಿರ್ದೇಶಕ ದರ್ಶನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಭವಾನಿ ಪ್ರಕಾಶ್, ನವೀನ್ ಕುಮಾರ್, ಆದ್ಯಶೇಖರ್ ಮುಖ್ಯ ಪಾತ್ರಗಳಲ್ಲಿದ್ದಾರೆ.