ಸಾರಾಂಶ
ನಟಿ ರೂಪಿಕಾ ಸಾರಥ್ಯದಲ್ಲಿ ಜಾನಕಿ ರಾಮ ಆಲ್ಬಂ ಬಿಡುಗಡೆ ಆಗಿದೆ
ಕನ್ನಡಪ್ರಭ ಸಿನಿವಾರ್ತೆ ಸುರೇಶ್ ಚಿಕ್ಕಣ್ಣ ಅವರ ಸಿರಿ ಮ್ಯೂಸಿಕ್ ಅರ್ಪಿಸಿರುವ, ನಟಿ ರೂಪಿಕಾ ಅವರ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಸಾರಥ್ಯದ ‘ಜಾನಕಿ ರಾಮ’ ಆಲ್ಬಂ ಬಿಡುಗಡೆ ಆಗಿದೆ.
ಈ ಆಲ್ಬಂ ಹಾಡನ್ನು ಶಾಸಕ ರಾಜು ಗೌಡ, ಡಿಎಸ್ ಮ್ಯಾಕ್ಸ್‌ನ ಎಂ ಡಿ ದಯಾನಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷ ಭಾ ಮ ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟಿ ಪ್ರಿಯಾಂಕ ಉಪೇಂದ್ರ, ಪೊಲೀಸ್ ಅಧಿಕಾರಿ ಶಂಕರ್ ಬಿಡುಗಡೆ ಮಾಡಿದರು.ನಟಿ ರೂಪಿಕಾ, ‘ಅನಿರುದ್ಧ್, ನಿರಂಜನ ದೇಶಪಾಂಡೆ ನಟಿಸಿರುವ, ಅದ್ವೈತ್ ಶೆಟ್ಟಿ ನಿರ್ದೇಶನ, ಮನೋಜ್ ಸೌಗಂಧ್ ಸಾಹಿತ್ಯ, ನೀತು ನಿನಾದ್ ಗಾಯನ ಹಾಗೂ ಸಂಗೀತ ನೀಡಿರುವ ಹಾಡಿದು’ ಎಂದರು.