ರಣಾಕ್ಷ ಚಿತ್ರದ ಆಡಿಯೋ, ಟೀಸರ್‌ ಬಿಡುಗಡೆ

| Published : Jan 24 2024, 02:02 AM IST

ರಣಾಕ್ಷ ಚಿತ್ರದ ಆಡಿಯೋ, ಟೀಸರ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಬರ ರಣಾಕ್ಷ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

‘ರಣಾಕ್ಷ’ ಚಿತ್ರದ ಆಡಿಯೋ ಹಾಗೂ ಟೀಸರನ್ನು ಡಾ ವಿ ನಾಗೇಂದ್ರ ಪ್ರಸಾದ್‌ ಬಿಡುಗಡೆ ಮಾಡಿದರು. ರಾಘವ ನಿರ್ದೇಶನ, ಸೀರುಂಡೆ ರಘು ನಾಯಕರಾಗಿ, ರಕ್ಷಾ ಮತ್ತು ರೋಹಿ ನಾಯಕಿಯರಾಗಿ ನಟಿಸಿರುವ ಈ ಸಿನಿಮಾವನ್ನು ರಾಮು ನಿರ್ಮಾಣ ಮಾಡಿದ್ದಾರೆ.

ರಾಘವ ಮಾತನಾಡಿ, ‘ಹದ್ದಿನಂತೆ ಕಣ್ಣಿಟ್ಟು ಕಾಯುವವವಿಗೆ ರಣಾಕ್ಷ ಎನ್ನುತ್ತೇವೆ. ಇದು ಸಸ್ಪೆನ್ಸ್, ಥ್ರಿಲ್ಲರ್ ಕತೆಯನ್ನು ಒಳಗೊಂಡ ಚಿತ್ರ. ಮಂತ್ರ , ತಂತ್ರ , ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಅದು ಹೇಗೆ ಎಂಬುದನ್ನು ಹೇಳುವ ಕತೆ ಇಲ್ಲಿದೆ’ ಎಂದರು.

ಸೀರುಂಡೆ ರಘು, ‘ಮೊದಲ ಬಾರಿಗೆ ಕಾಮಿಡಿ ಬಿಟ್ಟು ಕ್ಲಾಸ್‌, ಮಾಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು. ನಿರ್ಮಾಪಕ ರಾಮು, ‘ನನಗೂ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಈ ಚಿತ್ರ ಗೆದ್ದರೆ ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆ ಇದೆ’ ಎಂದರು. ನಟಿಯರಾದ ರಕ್ಷಾ ,ರೋಹಿ, ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್‌ ಆಲಾಪ್‌, ಚಿತ್ರದ ಛಾಯಾಗ್ರಹಕ ದೀಪಕ್‌ ಕುಮಾರ್‌ ಇದ್ದರು.