ಫೆ.9ರಂದು ಜಸ್ಟ್ ಪಾಸ್ ಬಿಡುಗಡೆ

| Published : Feb 07 2024, 01:46 AM IST

ಸಾರಾಂಶ

ಶ್ರೀ, ಪ್ರಣತಿ, ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಜಸ್ಟ್ ಪಾಸ್ ಸಿನಿಮಾ ಜಸ್ಟ್ ಪಾಸ್ ವಿದ್ಯಾರ್ಥಿಗಳ ಬದುಕು, ಬವಣೆ ಸಾರುವ ಕಥಾವಸ್ತು ಹೊಂದಿದೆ.

ಕನ್ನಡಪ್ರಭ ಸಿನಿವಾರ್ತೆ

ಕಂಟೆಂಟ್ ಆಧರಿತ ಸಿನಿಮಾಗಳ ನಿರ್ದೇಶಕ ಕೆಎಂ ರಘು ನಿರ್ದೇಶನ ಮಾಡಿರುವ ‘ಜಸ್ಟ್ ಪಾಸ್’ ಸಿನಿಮಾ ಫೆ.9ರಂದು ರಿಲೀಸ್ ಆಗಲಿದೆ. ಶ್ರೀ, ಪ್ರಣತಿ ಸಿನಿಮಾದ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ.ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳ ಸಂಕಷ್ಟಗಳನ್ನು ಸೂಚ್ಯವಾಗಿ ತಿಳಿಸುವ ಈ ಸಿನಿಮಾ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗೆಂದೇ ಹೊಸತೊಂದು ಕಾಲೇಜು ತೆರೆಯುವ ಕಥಾಹಂದರವನ್ನು ಹೊಂದಿದೆ. ಆ ಕಾಲೇಜಿನ ಪ್ರಾಂಶುಪಾಲರಾಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ಕೆ.ವಿ.ಶಶಿಧರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದ ನಿರ್ಮಾಪಕರ ಕತೆ ಕುತೂಹಲಕರವಾಗಿದೆ. ಸಿನಿಮಾ ನಾಯಕರಾಗಲು ಬಂದಿದ್ದ ಕೆ.ವಿ. ಶಶಿಧರ್ ಅವಕಾಶ ಸಿಗದೆ ಬೇರೆ ಉದ್ಯಮ ಮಾಡಿ ಈಗ ಸಿನಿಮಾ ನಿರ್ಮಾಣದ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಕುರಿತು ಶಶಿಧರ್, ‘ನಾನು ನಟಿಸಲು ಬಂದಿದ್ದಾಗ ನನಗೆ ಯಾರೂ ಅವಕಾಶ ಕೊಡಲಿಲ್ಲ. ಈಗ ನಾನು ನಿರ್ಮಾಪಕನಾಗುವ ಮೂಲಕ ಬೇರೆ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದೇನೆ’ ಎಂದಿದ್ದಾರೆ.

ಚಿತ್ರದ ನಿರ್ದೇಶಕ ರಘು, ‘ನಮ್ಮ ತ್ರ ಇಷ್ಟು ಅದ್ದೂರಿಯಾಗಿ ಬರಲು ನಮ್ಮ ನಿರ್ಮಾಪಕ ಕೆ.ವಿ.ಶಶಿಧರ್ ಅವರು ಕಾರಣ. ಯಾವುದೇ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರಿಗೂ ನಾನು ಈ ಸಮಯದಲ್ಲಿ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ.