ಕಲಿ ಕುಡುಕರು ಚಿತ್ರದ ಟ್ರೇಲರ್‌ ಬಿಡುಗಡೆ

| Published : Feb 09 2024, 01:49 AM IST

ಸಾರಾಂಶ

ಹೊಸ ಪ್ರತಿಭೆಗಳ ಕಲಿ ಕುಡುಕರು ಹೆಸರಿನ ಚಿತ್ರಕ್ಕೆ ಈಗಷ್ಟೆ ಚಿತ್ರೀಕರಣ ಮುಗಿದಿದೆ.

ಕನ್ನಡಪ್ರಭ ಸಿನಿವಾರ್ತೆ

‘ಕಲಿ ಕುಡುಕರು’ ಚಿತ್ರದ ಟ್ರೈಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಮಹೇಶ್‌ ಎನ್‌ ನಿರ್ಮಾಣ, ಕರಣ್‌ ಸವ್ಯಸಾಚಿ ನಿರ್ದೇಶನದ ಈ ಚಿತ್ರ ಆಟೋ ಡ್ರೈವರ್, ಉಂಡಾಡಿ ಗುಂಡ, ರಿಯಲ್‌ ಎಸ್ಟೇಟ್‌ ಬ್ರೋಕರ್‌, ಅನಾಥ ನಿರುದ್ಯೋಗಿ ಪಾತ್ರಗಳ ಕತೆಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ನಿರ್ಮಾಪಕ ಮಹೇಶ್‌ ಎನ್‌, ‘ಈ ಚಿತ್ರದ ಮೂಲಕ ಕುಡಿಯುವುದರಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸಿದ್ದೇವೆ’ ಎಂದರು. ಚಿತ್ರಕ್ಕೆ ಸನ್ನಿ ಮಾಧವನ್‌ ಸಂಗೀತ, ಚಿತ್ತೋರ್‌ ಸೂರಿ ಕ್ಯಾಮೆರಾ ಇದೆ. ನಾಗೇಂದ್ರ ಅರಸ್‌, ಸೋನು ಗೌಡ, ರಿತ್ಯಾ, ಮಹೇಶ್‌ ಎನ್‌, ಅಶೋಕ್‌, ರವೀಶ್‌, ಶರತ್‌, ಲೋಹಿತ್ ,ಶ್ರುತಿ, ಅರ್ಚನಾ, ಮಂಜುಳಾ ರೆಡ್ಡಿ ಮುರುಳಿ ನಟಿಸಿದ್ದಾರೆ.