ಸಾರಾಂಶ
ಭಾರ್ಗವ್ ಕೃಷ್ಣ ನಟನೆ, ನಿರ್ಮಾಣದ ಓಂ ಶಿವಂ ಸಿನಿಮಾದ ಹಾಡು ಬಿಡುಗಡೆಯಾಗಿದೆ.
ಭಾರ್ಗವ್ ಕೃಷ್ಣ ಅಭಿನಯದ ‘ಓಂ ಶಿವಂ’ ಚಿತ್ರದ ಲಿರಿಕಲ್ ಆಡಿಯೋ ಬಿಡುಗಡೆಯಾಗಿದೆ. ಭಾರ್ಗವ್ ಕೃಷ್ಣ ತಂದೆ ಕೃಷ್ಣ ಕೆ ಎನ್ ಈ ಚಿತ್ರದ ನಿರ್ಮಾಪಕರು. ಆಲ್ವಿನ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಈ ಬಗ್ಗೆ ವಿವರ ನೀಡಿದ ನಿರ್ದೇಶಕ ಆಲ್ವಿನ್, ‘ಇದು ಲವ್‌ಸ್ಟೋರಿ. ಜೊತೆಗೆ ಅನೇಕ ಮನರಂಜನೀಯ ಅಂಶಗಳಿವೆ. ಸಾಹಸ ಸನ್ನಿವೇಶಗಳೂ ಈ ಚಿತ್ರದಲ್ಲಿದೆ’ ಎಂದರು. ವಿರಾಣಿಕ ಶೆಟ್ಟಿ ಚಿತ್ರದ ನಾಯಕಿ. ಅಂಜಲಿ ಎಂಬ ಪಾತ್ರ ಅವರದು. ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ವರ್ಧನ್, ಅಪೂರ್ವ, ಲಕ್ಷ್ಮೀ ನಟಿಸಿದ್ದಾರೆ.