ರಾಷ್ಟ್ರ ಪ್ರಶಸ್ತಿ ಪ್ರಶಸ್ತಿ ವಿಜೇತ ಮಧ್ಯಂತರ ಕಿರುಚಿತ್ರ ಫೀಚರ್‌ ಸಿನಿಮಾ ಆಗಲಿದೆ : ದಿನೇಶ್‌ ಶೆಣೈ

| Published : Oct 03 2024, 01:18 AM IST / Updated: Oct 03 2024, 07:35 AM IST

Film Theater
ರಾಷ್ಟ್ರ ಪ್ರಶಸ್ತಿ ಪ್ರಶಸ್ತಿ ವಿಜೇತ ಮಧ್ಯಂತರ ಕಿರುಚಿತ್ರ ಫೀಚರ್‌ ಸಿನಿಮಾ ಆಗಲಿದೆ : ದಿನೇಶ್‌ ಶೆಣೈ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಪ್ರಶಸ್ತಿ ವಿಜೇತ ಮಧ್ಯಂತರ ಕಿರುಚಿತ್ರ ಫುಲ್‌ ಲೆನ್ತ್‌ ಫೀಚರ್‌ ಫಿಲಂ ಆಗಲಿದೆ.

 ಸಿನಿವಾರ್ತೆ 

‘ನಾನ್‌ ಫೀಚರ್‌ ಸಿನಿಮಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿರುವ ಮಧ್ಯಂತರ ಚಿತ್ರವನ್ನು ಫೀಚರ್‌ ಸಿನಿಮಾವಾಗಿಸುವ ಪ್ರಯತ್ನ ಚಾಲ್ತಿಯಲ್ಲಿದೆ’ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ದಿನೇಶ್‌ ಶೆಣೈ ಹೇಳಿದ್ದಾರೆ.

‘ಮಧ್ಯಂತರ’ ಕಿರುಚಿತ್ರ ಪ್ರದರ್ಶನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಶೆಣೈ, ‘ಇದು 70 ಹಾಗೂ 80ರ ದಶಕದ ಕಥೆ ಹೇಳುವ, 16 ಎಂಎಂ ನೆಗೆಟಿವ್‌ನಲ್ಲೇ ಚಿತ್ರೀಕರಿಸಿರುವ 36 ನಿಮಿಷಗಳ ಕಿರುಚಿತ್ರ. ದಾವಣಗೆರೆ ಭಾಷೆಯಲ್ಲಿದೆ. ಸಣ್ಣ ಪಟ್ಟಣದ ಇಬ್ಬರು ಸ್ನೇಹಿತರ ಸಿನಿಮಾ ವ್ಯಾಮೋಹ ಇದರ ಕಥಾಹಂದರ. ಹಿರಿಯ ನಿರ್ಮಾಪಕ ಮಾಣಿಕ್‌ ಚಂದ್‌ ಸಂದರ್ಶನವೊಂದರಲ್ಲಿ ಆಡಿದ ಮಾತು ಈ ಸಿನಿಮಾಗೆ ಪ್ರೇರಣೆ. ಸದ್ಯ ನಿರ್ಮಾಪಕರ ಹುಡುಕಾಟದಲ್ಲಿದ್ದೇವೆ. ಸಿಕ್ಕ ತಕ್ಷಣ ಫೀಚರ್‌ ಸಿನಿಮಾ ಕೆಲಸಗಳು ಪ್ರಾರಂಭವಾಗುತ್ತದೆ’ ಎಂದು ತಿಳಿಸಿದ್ದಾರೆ.

ನಟಿ, ನಿರ್ಮಾಪಕಿ ಜಯಮಾಲ, ‘ಸರ್ಕಾರ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಗಳಿಗೆ ನೀಡುತ್ತಿದ್ದ ಧನ ಸಹಾಯ ಸ್ಥಗಿತಗೊಂಡಿದೆ, ಅದನ್ನು ಮುಂದುವರಿಸಬೇಕು’ ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್‌ ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್ , ಕಲಾವಿದರಾದ ವೀರೇಶ್, ರಾಜ್‌ಕುಮಾರ್‌ ಶ್ರೀನಿವಾಸನ್‌, ರಮೇಶ್ ಪಂಡಿತ್ ಸುದ್ದಿಗೋಷ್ಠಿಯಲ್ಲಿದ್ದರು.