ಮೆಜೆಸ್ಟಿಕ್ 2 ಚಿತ್ರಕ್ಕೆ ಮುಹೂರ್ತ

| Published : Apr 03 2024, 01:30 AM IST / Updated: Apr 03 2024, 05:57 AM IST

ಸಾರಾಂಶ

ಮೆಜೆಸ್ಟಿಕ್ 2 ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.

  ಸಿನಿವಾರ್ತೆ :  ‘ಮೆಜೆಸ್ಟಿಕ್ 2’ ಚಿತ್ರಕ್ಕೆ ಮುಹೂರ್ತ ನಡೆದಿದೆ. ಚಿತ್ರದ ಪ್ರಥಮ ದೃಶ್ಯಕ್ಕೆ ನಟಿ ಶ್ರುತಿ ಕ್ಯಾಮೆರಾ ಚಾಲನೆ ಮಾಡಿದರೆ, ನಿರ್ಮಾಪಕ ಆನಂದಪ್ಪ ಪತ್ನಿ ನಿರ್ಮಲಾ ಕ್ಲಾಪ್ ಮಾಡಿದರು. ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ ಹಾಗೂ ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ನಿರ್ದೇಶಕ ರಾಮು ಮಾತನಾಡಿ, ‘ಬೆಂಗಳೂರಿನ ಕೇಂದ್ರಬಿಂದು ಮೆಜೆಸ್ಟಿಕ್‌ ಬಸ್‌ ನಿಲ್ದಾಣ. ಇಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೆಯುತ್ತವೆ, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂದು ಹೇಳುವ ಚಿತ್ರ ಇದು. ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದನ್ನು ಕಣ್ಣಾರೆ ನೋಡಿದ್ದೆ. ಆ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರಕ್ಕೆ ಕಥೆ ಬರೆದಿದ್ದೇನೆ’ ಎಂದರು.

ಶ್ರುತಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಹಿತಾ ವಿನ್ಯಾ ಚಿತ್ರದ ನಾಯಕಿ. ವಿನು ಮನಸು ಸಂಗೀತ, ವೀನಸ್ ಮೂರ್ತಿ ಅವರು ಛಾಯಾಗ್ರಹಣ ಚಿತ್ರಕ್ಕಿದೆ.