ಯಶ್ ನಟನೆಯ ಟಾಕ್ಸಿಕ್ ಚಿತ್ರದಲ್ಲಿ ನಯನತಾರಾ

| Published : May 05 2024, 02:01 AM IST / Updated: May 05 2024, 05:40 AM IST

ಯಶ್ ನಟನೆಯ ಟಾಕ್ಸಿಕ್ ಚಿತ್ರದಲ್ಲಿ ನಯನತಾರಾ
Share this Article
  • FB
  • TW
  • Linkdin
  • Email

ಸಾರಾಂಶ

ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ನಯನತಾರಾ ಬರಲಿದ್ದಾರೆ ಎನ್ನುವ ಸುದ್ದಿ ಇದೆ.

 ಸಿನಿವಾರ್ತೆ

ಯಶ್‌ ನಟನೆಯ ‘ಟಾಕ್ಸಿಕ್‌’ ಚಿತ್ರದಿಂದ ಕರೀನಾ ಕಪೂರ್‌ ಹೊರ ನಡೆದಿದ್ದಾರೆ. ಆ ಪಾತ್ರದಲ್ಲಿ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಮೂಲಗಳು ತಿಳಿಸಿವೆ.

ಕರೀನಾ ಕಪೂರ್‌ ಮೊದಲು ಪಾತ್ರಕ್ಕೆ ಒಪ್ಪಿಕೊಂಡಿದ್ದರೂ ನಾನಾ ಕಾರಣಗಳಿಂದ ಅವರು ಚಿತ್ರದಿಂದ ಹೊರನಡೆದಿದ್ದರು. ‘ಟಾಕ್ಸಿಕ್‌’ ಚಿತ್ರತಂಡ ಚಿತ್ರದ ಪ್ರಮುಖ ಪಾತ್ರಗಳಿಗೆ ಪ್ಯಾನ್‌ ಇಂಡಿಯಾ ಸ್ಟಾರ್‌ಗಳನ್ನು ಕರೆತರುವ ಉದ್ದೇಶ ಹೊಂದಿದೆ. ಹಾಗಾಗಿ ಆ ಪಾತ್ರಕ್ಕೆ ಈಗ ನಯನತಾರಾರನ್ನು ಚಿತ್ರದ ತಾರಾಬಳಗಕ್ಕೆ ಕರೆತರುವ ನಿರ್ಧಾರ ಮಾಡಿದೆ ಎನ್ನಲಾಗಿದೆ.