ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್‌

| Published : Apr 03 2024, 01:32 AM IST / Updated: Apr 03 2024, 05:55 AM IST

ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಗಳು ಅರ್ನಾ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ನಟಿ ಪ್ರಣೀತಾ ಸುಭಾಷ್‌ ಆಕೆಯ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

  ಸಿನಿವಾರ್ತೆ :  ನಟಿ ಪ್ರಣೀತಾ ಸುಭಾಷ್‌ ಮಗಳ ಜೊತೆಗಿನ ಕಲರ್‌ಫುಲ್‌ ಫೋಟೋ ಹಂಚಿಕೊಂಡಿದ್ದಾರೆ. ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಮಗಳು ಆರ್ನಾಗೆ ಈ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ‘ನನ್ನ ಮುದ್ದು ಗೊಂಬೆಗೆ ಈಗ 2 ವರ್ಷ. ಅಪ್ಪ - ಅಮ್ಮ ಆಗಿ ನಾವು ಬಡ್ತಿ ಪಡೆದು 2 ವರ್ಷ ಕಳೆದಿದೆ’ ಎಂದು ಪ್ರಣೀತಾ ತಿಳಿಸಿದ್ದಾರೆ.

ಸದ್ಯ ಮಲಯಾಳಂನ ‘ತಂಕಮಣಿ’ ಸಿನಿಮಾದಲ್ಲಿ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಪ್ರಣೀತಾ ನಟಿಸುತ್ತಿದ್ದಾರೆ. ರಿಷಿ ಜೊತೆ ಇವರು ನಟಿಸಿದ ‘ರಾಮನ ಅವತಾರ’ ಸಿನಿಮಾ ಏ.10ಕ್ಕೆ ತೆರೆಗೆ ಬರಲಿದೆ.