ಸಾರಾಂಶ
ಪಂಚೇಂದ್ರಿಯಂ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಕನ್ನಡಪ್ರಭ ಸಿನಿವಾರ್ತೆ
ಸೋಮಶೇಖರ್ ನಿರ್ಮಿಸಿರುವ, ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ ‘ಪಂಚೇಂದ್ರಿಯಂ’ ಚಿತ್ರದ ಹಾಡು, ಟೀಸರ್ ಅನ್ನು ಡಾ ವಿ.ನಾಗೇಂದ್ರ ಪ್ರಸಾದ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಪಂಚೇಂದ್ರಿಯಗಳಾದ ದೃಷ್ಟಿ, ಶ್ರವಣ, ವಾಸನೆ, ರುಚಿ ಹಾಗೂ ಸ್ಪರ್ಶ... ಇವುಗಳನ್ನು ದುರ್ಬಳಕೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದೇ ಈ ಚಿತ್ರದ ಕತೆ. ಚಿತ್ರದಲ್ಲಿ ಆರು ಹಾಡುಗಳಿದೆ. ವಿನಯ್ ಸೂರ್ಯ ನಾಯಕ, ವಿದ್ಯಾಶ್ರೀ, ರಾಘವಿ ನಾಯಕಿಯರು. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿರುವ ಅಫ್ಜಲ್ ಅವರು ಈ ಚಿತ್ರದ ದ್ವಿತೀಯ ನಾಯಕ.ವಿನಯ್ ಸೂರ್ಯ ಮಾತನಾಡಿ, ‘ನಾನು ಈ ಹಿಂದೆ ‘ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಚಿತ್ರದಲ್ಲಿ ಬಾಲನಟನಾಗಿ ಅಭಿಯಿಸಿದ್ದೆ. ಈಗ ‘ಪಂಚೇಂದ್ರಿಯಂ’ ಚಿತ್ರದಲ್ಲಿ ನಾಯಕನಾಗಿದ್ದೇನೆ’ ಎಂದರು. ಯತಿರಾಜ್, ವಿಕ್ಟರಿ ವಾಸು, ಗಣೇಶ್ ರಾವ್, ಪವನ್, ಸಿರಿಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ ಉಪಸ್ಥಿತರಿದ್ದರು.
;Resize=(128,128))
;Resize=(128,128))